Advertisement

ನಗರದ ಮರಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳೇನು?

11:12 AM Apr 14, 2017 | Team Udayavani |

ಬೆಂಗಳೂರು: ರಾಜಧಾನಿಯ ವಿವಿಧ ಭಾಗಗಳಲ್ಲಿ ಬೆಳೆದಿರುವ ಮರಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿ, ಅರಣ್ಯ ಇಲಾಖೆ ಹಾಗೂ ಪೊಲೀಸ್‌ ವಿಭಾಗಕ್ಕೆ ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಗುರುವಾರ ತಾಕೀತು ಮಾಡಿದ್ದಾರೆ.

Advertisement

ಮಾರತ್‌ಹಳ್ಳಿ ರಿಂಗ್‌ ರಸ್ತೆ  ಹಾಗೂ ನಗರದ ಹಲವು  ಪ್ರದೇಶಗಳಲ್ಲಿ ಬೆಳೆದಿರುವ ಮರಗಳಿಗೆ ದುಷ್ಕರ್ಮಿಗಳು ಆ್ಯಸಿಡ್‌ ಹಾಕಿದ್ದ ದೂರಿಗೆ ಸಂಬಂಧಪಟ್ಟಂತೆ  ಅಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಅವರು, ಈ ಮೌಖೀಕ ಸೂಚನೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದ ಬಿಬಿಎಂಪಿ ಉಪ ವಿಭಾಗ-1ರ ಸಹಾಯಕ ಅರಣ್ಯ ಸಂರಕ್ಷಣಾಕಾರಿ ಎನ್‌.ಶಾಂತಕುಮಾರ್‌, ಈಗಾಗಲೇ ನಗರದಲ್ಲಿ ಮರಗಳನ್ನು ಅಕ್ರಮವಾಗಿ ಕಡಿಯುವ ಆರೋಪಿಗಳಿಗೆ 10 ಸಾವಿರ ರೂ. ದಂಡ ವಿಸಲಾಗುತ್ತಿದೆ. ಮಾರ್‌ತ್‌ಹಳ್ಳಿಯ ರಿಂಗ್‌ ರಸ್ತೆಯಲ್ಲಿ ಒಂದು ಡಜನ್‌ಮರಗಳ ಬುಡಕ್ಕೆ ಆ್ಯಸಿಡ್‌ ಹಾಕಿರುವ ಆರೋಪಿಗಳು ಪತ್ತೆಯಾಗಬೇಕಿದೆ ಎಂದು ವಿವರಣೆ ನೀಡಿದರು.

ವಿಚಾರಣೆಗೆ ಗೈರು!
ಇನ್ನು ಮರಗಳ ಬುಡಕ್ಕೆ ಆ್ಯಸಿಡ್‌ ಹಾಕಿದವರ ವಿರುದ್ಧ ಕೈಗೊಂಡ ಕ್ರಮಗಳ ದೂರಿನ ಬಗ್ಗೆ ಪ್ರತಿವಾದಿಗಳಾಗಿರುವ ನಗರಾಭಿವೃದ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ಬಿಡಿಎ ಆಯುಕ್ತರು, ಪೊಲೀಸ್‌ ಆಯುಕ್ತರು ನಗರದ ಜಿಲ್ಲಾ ಅರಣ್ಯ ಸಂರಕ್ಷಣಾಕಾರಿಗಳು ವಿಚಾರಣೆಗೆ ಗೈರು ಹಾಜರಾಗಿದ್ದರು. ಈ ಕುರಿತು ಮಾತನಾಡಿದ ಲೋಕಾಯುಕ್ತ ಪಿ. ವಿಶ್ವನಾಥಶೆಟ್ಟಿಯವರು, ಗೈರು ಹಾಜರಾದ ಅಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಮತ್ತೂಮ್ಮೆ ಕಾಲಾವಕಾಶ ನೀಡಿ ಏ.26ಕ್ಕೆ ವಿಚಾರಣೆಯನ್ನು ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next