Advertisement
ರಸ್ತೆ ತಡೆ: ರೈತ ಸಂಘದ ತಾಲೂಕು ಘಟಕ, ಅಖೀಲ ಕರ್ನಾಟಕಕಬ್ಬು ಬೆಳೆಗಾರರ ಸಂಘ, ದಲಿತ ಸಂಘರ್ಷ ಸಮಿತಿ, ಕರವೇ, ಜಯ ಕರ್ನಾಟಕ ಸಂಘಟನೆ,ಕಾರ್ಮಿಕ ಸಂಘಟನೆ ಮತ್ತು ತಾಲೂಕು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದ ಗರುಡ ಗಂಭದ ವೃತ್ತದಲ್ಲಿ ಕೆಲ ಹೊತ್ತು ರಸ್ತೆ ತಡೆದು ಪ್ರತಿಭಟಿಸಿದರು. ಈ ವೇಳೆ ರಾಜ್ಯ ರೈತ ಸಂಘದ ವಿಭಾಗೀಯಕಾರ್ಯದರ್ಶಿ ಸರ ಗೂರುನಟರಾಜು ಮಾತನಾಡಿ, ಈ ಎರಡು ಕಾಯ್ದೆಗಳು ಬಂಡವಾಳಶಾಹಿ ಮತ್ತು ಕಾರ್ಪೊàರೆಟ್ ಕಂಪನಿಗಳಿಗೆ ಅನುಕೂಲ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ ಎಂದರು.
Related Articles
Advertisement
ಕೋಟೆ: ಪ್ರತಿಭಟನೆಗೆ ಕಾಂಗ್ರೆಸ್,ಜೆಡಿಎಸ್ ಸಾಥ್ :
ಎಚ್.ಡಿ.ಕೋಟೆ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ಬಂದ್‌ಗೆ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಪಟ್ಟಣದ ಅಂಬೇಡ್ಕರ ಸಮುದಾಯಭವನದಿಂದ ಎಚ್.ಬಿ.ರಸ್ತೆ ಮಾರ್ಗವಾಗಿ ತೆರಳಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮಿನಿವಿಧಾನ ಸೌಧದ ಮುಖ್ಯ ದ್ವಾರದಲ್ಲಿ ಸಮಾವೇಶಗೊಂಡರು.ಈ ವೇಳೆನಡೆದಪ್ರತಿಭಟನೆಗೆ ಕಾಂಗ್ರೆಸ್, ಜೆಡಿಎಸ್ ಸಾಥ್ ನೀಡಿದವು. ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ, ಜೆಡಿ ಎಸ್ ತಾಲೂಕು ಅಧ್ಯಕ್ಷ ರಾಜೇಂದ್ರ, ಪರಿ ಸರವಾದಿ ಕ್ಷೀರಸಾಗರ್ ಮತ್ತಿತರರು ಮಾತನಾಡಿ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ತುಂಡು ಭೂಮಿಹೊಂದಿರುವ ರೈತರು ತಮ್ಮ ಭೂಮಿ ಕಳೆದು ಕೊಂಡು ಉಳ್ಳವರ ಜೀತದಾಳುಗಳಾಗಿ ದುಡಿಯುವ ಬೇಕಾದ ಸ್ಥಿತಿ ನಿರ್ಮಾಣ ಗೊಳ್ಳುತ್ತದೆ. ಉಳ್ಳವರುಮತ್ತಷ್ಟು ಶ್ರೀಮಂತರಾಗಿಸಲು ಹುನ್ನಾರ ನಡೆಸಿ ಶ್ರೀಮಂತರ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು. ರಾಜ್ಯವ್ಯಾಪಿ ರೈತರು, ಅಸಂಘಟಿತ ಕೂಲಿಕಾರ್ಮಿಕರು ನಿರಂತರ ಉಗ್ರ ಪ್ರತಿಭಟನೆ ನಡೆಸಿ ಕಾಯ್ದೆಯನ್ನು ಕೈಬಿಡುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಮಹ ದೇವನಾಯ್ಕ, ದಸಂಸ ಸಂಚಾಲಕ ಶಿವ ಕುಮಾರ್, ದೇವರಾಜು, ರಾಜಶೇಖರ್, ಬಸವರಾಜು, ಸೋಗಳ್ಳಿ ಶಿವಣ್ಣ, ಜೀವಿಕ ಬಸವರಾಜು, ಅಕ್ಬರ್ ಪಾಷ, ದೇವಮ್ಮ, ಚೌಡಳ್ಳಿ ಜವರಯ್ಯ, ನಾಗರಾಜು, ಹೂ. ಕೆ.ಮಹೇಂದ್ರ, ಸೀತಾರಾಂ, ಶಿವರಾಜು, ಜವರನಾಯ್ಕ, ಲಿಂಗರಾಜು, ಶಂಕರ, ಕುಮಾರ,ಪ್ರಸಾದಿ, ಶಿವಯ್ಯ,ಹೆಗ್ಗನೂರು ನಿಂಗರಾಜು, ಭೀಮನಹಳ್ಳಿ ಮಹದೇವು, ಚಾ. ನಂಜುಂಡಮೂರ್ತಿ ಇತರರಿದ್ದರು. ಪಟ್ಟಣದ ವರ್ತಕರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.