Advertisement
ಕೆಪಿಟಿಸಿಎಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯ ಧೋರಣೆಯಿಂದಾಗಿ ರಾಜಾÂದ್ಯಂತ ಸಿ ಮತ್ತು ಡಿ ದರ್ಜೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಮಾರು 2,170 ನೌಕರರು ದುಬಾರಿಯ ಈ ದಿನಗಳಲ್ಲಿ ಪರಿಷ್ಕೃತ ಪಿಂಚಣಿ ದೊರೆಯದೆ ಜೀವನ ಸಾಗಿಸಲು ಪರಿತಪಿಸುವಂತಾಗಿದೆ.
ಜನವರಿ 1ರಿಂದ ಕೆಪಿಟಿಸಿಎಲ್ 39,610 ರೂ. ಮೂಲ ವೇತನ ಪಡೆಯುತ್ತಿದ್ದವರಿಗೆ ಹಾಗೂ ಗರಿಷ್ಠ 19,950 ರೂ. ನಿವೃತ್ತಿ ವೇತನ ಪಡೆಯುತ್ತಿರುವವರಿಗೆ ಮಾತ್ರ ಪರಿಷ್ಕೃತ ಪಿಂಚಣಿ ಮತ್ತು ಕುಟುಂಬ ಪಿಂಚಣಿ ನೀಡಿ ಎಂದು ಆದೇಶ ಹೊರಡಿಸಲಾಗಿದೆ. ಈ ಪ್ರಕಾರ ಕೆಪಿಟಿಸಿಎಲ್‌ನ ಈ ತೀರ್ಮಾನ 39,610 ರೂ.ಗಳಿಗಿಂತ ಕಡಿಮೆ ವೇತನ ಪಡೆಯುತ್ತಿದ್ದ ನಿವೃತ್ತ ನೌಕರರಿಗೆ ಪಿಂಚಣಿ ಹೆಚ್ಚು ಮಾಡಲು ಬರುವುದಿಲ್ಲ ಎನ್ನುತ್ತಿದೆ ಕೆಪಿಟಿಸಿಎಲ್.
Related Articles
Advertisement
ಸರ್ಕಾರದ ಆದೇಶ ಪಾಲಿಸಿಲ್ಲ: ಈ ಬಗ್ಗೆ ನಿವೃತ್ತ ನೌಕರರು 2013ರಲ್ಲಿ ಸರ್ಕಾರ ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ 39,610 ರೂ.ಗಳಿಗಿಂತ ಕಡಿಮೆ ಮೂಲ ವೇತನ ಪಡೆಯುತ್ತಿದ್ದ ಎಲ್ಲ ಸಂಬಳದಾರರಿಗೂ ಪರಿಷ್ಕೃತ ನಿವೃತ್ತಿ ಮತ್ತು ಕುಟುಂಬ ವೇತನ ಕನಿಷ್ಠ 4,800 ಹಾಗೂ ಗರಿಷ್ಠ 39, 900 ರೂ. ನೀಡುವಂತೆ ಸರ್ಕಾರ ಆದೇಶ ಹೊರಡಿಸಿದರೂ ಕೆಪಿಟಿಸಿಎಲ್ ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ.
ಸಿಎಂ ಕಚೇರಿ ಸೂಚನೆಗೂ ನಿರ್ಲಕ್ಷ್ಯನಿವೃತ್ತಿ ವೇತನವನ್ನೇ ನಂಬಿಕೊಂಡು ಜೀವನ ಸಾಗಿಸಲು ಹೆಣಗುತ್ತಿರುವ ನಿವೃತ್ತ ನೌಕರರು ನಮ್ಮ ಪಿಂಚಣಿ ಪರಿಷ್ಕರಣೆ ಮಾಡಿಕೊಡಿ ಎಂದು 2016ರ ನವೆಂಬರ್ 17ರಂದು ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿ ಅರುಣ್ ಫುರ್ಟಾಡೋ ಅವರು 2017ರ ಜನವರಿ 31ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಇವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಕಚೇರಿಯಿಂದಲೇ ಹೋದ ಪತ್ರಕ್ಕೂ ಕಳೆದ ನಾಲ್ಕು ತಿಂಗಳಿಂದ ಯಾವುದೇ ಕ್ರಮ ಕೈಗೊಳ್ಳದೆ ಕೆಪಿಟಿಸಿಎಲ್ ಆಡಳಿತ ಮಂಡಳಿ ನಿವೃತ್ತ ನೌಕರರನ್ನು ಸತಾಯಿಸುತ್ತಿದೆ. ತಡವಾಗಿ ನಿವೃತ್ತರಾದವರಿಗೆ ಹೆಚ್ಚಿನ ನಿವೃತ್ತಿ ವೇತನ ದೊರೆಯುತ್ತಿಲ್ಲ ಎಂಬ ದೂರುಗಳು ಇರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ರಾಜಾÂದ್ಯಂತ ಈ ಅವಧಿಯಲ್ಲಿ ನಿವೃತ್ತರಾದ ಎಷ್ಟು ಜನ ಉದ್ಯೋಗಿಗಳಿದ್ದಾರೆ ಎಂಬು ದನ್ನುಪರಿಶೀಲಿಸಿ, ಸಮಸ್ಯೆ ಬಗೆಹರಿಸುತ್ತೇವೆ.
– ಎಂ.ರಾಮಕೃಷ್ಣ,
ನಿರ್ದೇಶಕರು, ಕೆಪಿಟಿಸಿಎಲ್ – ಗಿರೀಶ್ ಹುಣಸೂರು