Advertisement

ಕೆಪಿಎಸ್‌ಸಿ: ದುರಾಚಾರಕ್ಕೆ 3 ಅಭ್ಯರ್ಥಿಗಳಿಗೆ ದಂಡನೆ

10:41 PM Jan 01, 2020 | Lakshmi GovindaRaj |

ಬೆಂಗಳೂರು: ಆಯೋಗದ ಪರೀಕ್ಷೆಗಳಲ್ಲಿನ ದುರಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದ ಮೂವರು ಅಭ್ಯರ್ಥಿಗಳ ಪ್ರವೇಶಾತಿ ರದ್ದುಪಡಿಸಿದ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಡಿಬಾರ್‌ ಮಾಡಿ ದಂಡನೆ ವಿಧಿಸಿದೆ. ಈ ಕುರಿತು ಡಿ.31ರಂದು ಕೆಪಿಎಸ್‌ಸಿ ಆದೇಶ ಹೊರಡಿಸಿದೆ.

Advertisement

ಅದರಂತೆ, ಹನುಮಂತ ಶಿವಪ್ಪ ವಡ್ಡರ್‌ ಇವರನ್ನು ಗೆಜೆಟೆಡ್‌ ಪ್ರೊಬೇಷನರ್ 2015ನೇ ಸಾಲಿನ ಪ್ರವೇಶಾತಿ ರದ್ದುಪಡಿಸಲಾಗಿದೆ. ಅದೇ ರೀತಿ ಕೆ. ನೇತ್ರಕುಮಾರ್‌ ಇವರಿಗೆ 2017ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಯಿಂದ ಡಿಬಾರ್‌ ಮಾಡಲಾಗಿದೆ.

ನೇಮಕ ರದ್ದುಪಡಿಸಿ ಮುಂದಿನ 3ವರ್ಷ ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗದಂತೆ ದಂಡನೆ ವಿಧಿಸಲಾಗಿದೆ. ಅಲ್ಲದೇ ಸುನೀಲ್‌ ಬಿ. ವಳಸಂಗ ಇವರಿಗೆ 2017ನೇ ಸಾಲಿನ ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳ ಪರೀಕ್ಷೆಯಿಂದ ಡಿಬಾರ್‌ ಮಾಡುವುದಲ್ಲದೆ,

2017 ಮತ್ತು 2018ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಮತ್ತು ದ್ವೀತಿಯ ದರ್ಜೆ ಸಹಾಯಕರ ಹುದ್ದೆಗಳ ಹಾಗೂ 2018ನೇ ಸಾಲಿನ ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಂದಲೂ ಇವರ ಪ್ರವೇಶವನ್ನು ರದ್ದುಪಡಿಸಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next