Advertisement

ಸೆ.1ರಿಂದ ಕೆಪಿಎಲ್‌ ಟಿ20 ಆರಂಭ

02:18 PM Aug 15, 2017 | |

ಬೆಂಗಳೂರು: ಆರನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟಿ20 ಕ್ರಿಕೆಟ್‌ ಕೂಟಕ್ಕೆ ಸೆಪ್ಟಂಬರ್‌ 1 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ ತಂಡವನ್ನು ಬೆಳಗಾವಿ ಪ್ಯಾಂಥರ್ ಎದುರಿಸಲಿದೆ. ಕೆಪಿಎಲ್‌ ಒಟ್ಟು 24 ಪಂದ್ಯ,  19 ದಿನ, 3 ಕ್ರೀಡಾಂಗಣದಲ್ಲಿ ನಡೆಯಲಿದೆ.

Advertisement

ಸೆ.2ಕ್ಕೆ ಬೆಂಗಳೂರಿಗೆ ಮೊದಲ ಪಂದ್ಯ: ಪ್ರಸ್ತುತ ಕೆಪಿಎಲ್‌ಗೆ ಹೊಸ ತಂಡವಾಗಿ ಆಗಮಿಸಿರುವ ಬೆಂಗಳೂರು ಬ್ಲಾಸ್ಟರ್ ತಂಡ ಸೆ. 2ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ  ಸೆ. 3ರಂದು ಹಾಲಿ ಚಾಂಪಿಯನ್‌ ಬಳ್ಳಾರಿ ಟಸ್ಕರ್ ತಂಡ ನಮ್ಮ ಶಿವಮೊಗ್ಗ ತಂಡವನ್ನು ಎದುರಿಸಲಿದೆ. ಸೆ. 4ರಂದು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ್‌ ಒಡೆಯರ್‌ ಕ್ರೀಡಾಂಗಣದಲ್ಲಿ ಮೈಸೂರು ಆವೃತ್ತಿಯ ಮೊದಲ ಪಂದ್ಯಕ್ಕೆ ಚಾಲನೆ ಸಿಗಲಿದೆ. ಆತಿಥೇಯ ಮೈಸೂರು ತಂಡ ಮೊದಲ  ಪಂದ್ಯದಲ್ಲಿ ಬಿಜಾಪುರ ಬುಲ್ಸ್‌ ತಂಡವನ್ನು ಎದುರಿಸಲಿದೆ. ಪ್ರಸ್ತುತ ನಡೆಯುತ್ತಿರುವ ಭಾರತ – ಲಂಕಾ, ಮುಂಬರುವ ಭಾರತ – ಆಸ್ಟ್ರೇಲಿಯ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಕೆಪಿಎಲ್‌ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಪ್ರಕಟನೆಯಲ್ಲಿ ಕೂಟದ ಸಂಘಟಕ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ.

ಸೆಪ್ಟಂಬರ್‌ 23ಕ್ಕೆ ಫೈನಲ್‌: ಹುಬ್ಬಳ್ಳಿಯಲ್ಲಿ ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯ ನಡೆಯಲಿದೆ. ಫೈನಲ್‌ ಸೆಪ್ಟಂಬರ್‌ 23ಕ್ಕೆ ನಡೆಯಲಿದೆ. ಇದಕ್ಕೂ ಮೊದಲು ಸೆಪ್ಟಂಬರ್‌ 20ಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡ ಹಾಗೂ ಅಂಕಪಟ್ಟಿಯ 4ನೇ ಸ್ಥಾನಿ ತಂಡದ ನಡುವೆ ಮೊದಲ ಸೆಮಿಫೈನಲ್‌ ಹಣಾಹಣಿ ನಡೆಯಲಿದೆ. ಸೆಪ್ಟಂಬರ್‌ 22ಕ್ಕೆ ಲೀಗ್‌ನಲ್ಲಿ 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಮುಖಾಮುಖೀ ನಡೆಸಲಿವೆ. ಗೆದ್ದ ತಂಡಗಳು ಪ‌Åಶಸ್ತಿಗಾಗಿ ಸೆಣಸಾಟ ನಡೆಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next