Advertisement

ಬಡವರ ಹಸಿವು ನೀಗಿಸಿದ ಜನನಾಯಕಿ ಎಂ.ಪಿ.ಲತಾ

03:51 AM May 21, 2020 | Hari Prasad |

ಹರಪನಹಳ್ಳಿ: ರಾಜಕಾರಣಿಗಳೆಂದರೆ ಚುನಾವಣೆ ಬಂದಾಗಲೊಮ್ಮೆ ಮಾತ್ರ ಬರುವವರು ಎಂಬ ಮಾತಿದೆ.

Advertisement

ಆದರೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಇದಕ್ಕೆ ಅಪವಾದ ಎಂಬುದರಲ್ಲಿ ಎರಡು ಮಾತಿಲ್ಲ.

ಯಾವುದೇ ರಾಜಕೀಯ ಲಾಭ ನೋಡದೆ ಜನಸೇವೆ ಮಾಡುವವರ ಸಾಲಿನಲ್ಲಿ ಇವರು ನಿಲ್ಲುತ್ತಾರೆ.

ಲಾಕ್‌ಡೌನ್‌ ಘೋಷಣೆಯಾದ ಸಮಯದಲ್ಲಿ ಪಕ್ಷ, ಜಾತಿ ನೋಡದೇ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ನಿರಾಶ್ರಿತರು, ಬಡವರಿಗೆ ಆಹಾರ ಕಿಟ್‌, ಮಾಸ್ಕ್ ಸೇರಿದಂತೆ ರಕ್ಷಣಾ ಸಾಮಗ್ರಿ ವಿತರಿಸುವ ಮೂಲಕ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಅವರು ಮಾನವೀಯತೆಯ ಸಾಕಾರ ಮೂರ್ತಿ ಎನಿಸಿದ್ದಾರೆ.


ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ದಿ| ಎಂ.ಪಿ. ರವೀಂದ್ರರ ಜನ್ಮದಿನ ಅಂಗವಾಗಿ ಎಂ.ಪಿ. ರವೀಂದ್ರ ಪ್ರತಿಷ್ಠಾನ (ರಿ) ವತಿಯಿಂದ ತಾಲೂಕು ಆಡಳಿತ ಮೂಲಕ ಕಂದಾಯ, ಪೊಲೀಸ್‌, ಆರೋಗ್ಯ, ಪುರಸಭೆ, ವಕೀಲರು, ಶಿಕ್ಷಣ, ತಾಲೂಕು ಟಾಸ್ಕ್ಫೋರ್ಸ್‌ ಸಮಿತಿಗೆ 11 ಸಾವಿರ ಮಾಸ್ಕ್ ವಿತರಿಸಿ ಅಧಿಕಾರಿಗಳ ಸೇವೆ, ಕರ್ತವ್ಯವನ್ನು ಗೌರವಿಸಿದ್ದಾರೆ.

Advertisement

ಕುಲ ಕಸಬು ನಂಬಿಕೊಂಡು ಜೀವನ ಸಾಗಿಸುತ್ತಿರುವ ವಿಶ್ವಕರ್ಮ, ಮಡಿವಾಳ, ಸವಿತಾ ಸಮಾಜದವರಿಗೆ, ಟ್ಯಾಕ್ಸಿ ಚಾಲಕರಿಗೆ, ದೃಷ್ಟಿ ದೋಷವುಳ್ಳವರಿಗೆ, ಮಾಧ್ಯಮ ಮಿತ್ರರ ಮನೆ ಬಾಗಿಲಿಗೆ ಆಹಾರ ಧಾನ್ಯ ವಿತರಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಹಿರಿಮೆ ಅವರದು.

ಬಾಗಳಿ ಗ್ರಾಮದ ಎರಡು ಕುಂಬಾರ ಮನೆಗಳಲ್ಲಿರುವ ಮಡಿಕೆಗಳನ್ನು ಖರೀದಿಸುವ ಮೂಲಕ ಆ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಬಾಸಿಂಗ ತಯಾರಿಸುವವರಿಗೆ ಆರ್ಥಿಕ ನೆರವು ಕಲ್ಪಿಸಿದ್ದಾರೆ. ನಿಮಗೆ ಏನೇ ಸಹಾಯ ಬೇಕಾದರೂ ತಮಗೆ ತಿಳಿಸಿ ಎನ್ನುವ ಮೂಲಕ ಕ್ಷೇತ್ರದ ಜನರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.

ಕ್ಷೇತ್ರದ ಆಶಾ – ಎಎನ್‌ಎಂ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಣಮಟ್ಟದ ಲಂಚ್‌ ಬಾಕ್ಸ್‌, ಮಾಸ್ಕ್, ಸ್ಯಾನಿಟೈಸರ್‌ ಪ್ಯಾಡ್‌ 700 ಮಂದಿಗೆ ನೀಡುವ ಮೂಲಕ ಸೈನಿಕರಂತೆ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಧೈರ್ಯ ತುಂಬಿದ್ದಾರೆ. ಪ್ರಚಾರ ಬಯಸದೇ ಬಡವರಿಗೆ ನೆರವಿನ ಹಸ್ತ ಚಾಚುತ್ತಲೇ ಇದ್ದಾರೆ.

ಕೆಪಿಸಿಸಿ ರಿಲೀಫ್‌ ಫಂಡ್‌ಗೆ ದೇಣಿಗೆ


ರಾಜ್ಯದಲ್ಲಿ ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗಾಗಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಪಕ್ಷದ ರಿಲೀಫ್‌ ಫಂಡ್‌ಗೆ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ. ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಜತೆಗೂಡಿ ಮಹಿಳಾ ಘಟಕದ ಪದಾಧಿಕಾರಿಗಳೊಂದಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಚೆಕ್‌ ನೀಡಿದ್ದಾರೆ. ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಸಂಘಟನೆ ಜತೆಗೆ ಜನಪರ ಕಾರ್ಯಗಳನ್ನು ನಿರಂತರ ನಡೆಸಿಕೊಂಡು ಬರುತ್ತಿರುವುದನ್ನು ಕೆಪಿಸಿಸಿ ಅಧ್ಯಕ್ಷರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ತಮ್ಮನ ಸ್ಥಾನ ತುಂಬಿದ ಅಕ್ಕ
ಮಾಜಿ ಶಾಸಕ ದಿ| ಎಂ.ಪಿ. ರವೀಂದ್ರರ ಅಗಲಿಕೆ ನಂತರ ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಸಾರಥ್ಯ ವಹಿಸಿಕೊಂಡ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಸಹೋದರನ ಅನುಪಸ್ಥಿತಿ ಕಾಡದಂತೆ ಅವರ ಸ್ಥಾನ ತುಂಬಿದ್ದಾರೆ. ಎಂ.ಪಿ. ರವೀಂದ್ರರಂತೆ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದರೊಂದಿಗೆ ಕಲೆ-ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದಾರೆ.

371ಜೆ ಕಲಂ ಸೌಲಭ್ಯ ಕುರಿತು ಜನರಿಗೆ ಜಾಗೃತಿ ಮೂಡಿಸಿರುವುದರೊಂದಿಗೆ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ, ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್‌ ಯೋಜನೆಗಳು ಸಹೋದರ ರವೀಂದ್ರನ ಪ್ರಯತ್ನದಿಂದ ಆದ ಕಾರ್ಯಗಳು ಎಂಬುದನ್ನು ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದಾರೆ.


ಹರಪನಹಳ್ಳಿ ಸೊಸೆ ಎಂ.ಪಿ.ಲತಾ
ಸಜ್ಜನ ರಾಜಕಾರಣಿ ದಿ| ಎಂ.ಪಿ. ಪ್ರಕಾಶ್‌ ಅವರ ಹಿರಿಯ ಪುತ್ರಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಅವರು ತಂದೆ ಹಾಗೂ ಸಹೋದರನ ಹಾದಿಯಲ್ಲೇ ಸಾಗುತ್ತಿದ್ದು, ಕೇವಲ ರಾಜಕಾರಣಕ್ಕೆ ಸೀಮಿತವಾಗದೆ ಜನಪರ ಕೆಲಸಗಳಲ್ಲಿ ತೊಡಗಿದ್ದಾರೆ. ತವರು ಮನೆ ಹೂವಿನಹಡಗಲಿ ಆದರೂ ಗಂಡನ ಮನೆ ಹರಪನಹಳ್ಳಿ ಆಗಿರುವುದರಿಂದ ಹರಪನಹಳ್ಳಿ ಸೊಸೆ ಎಂಬ ಹೆಗ್ಗುರುತಿದೆ.

ಸ್ಥಳೀಯವರಾಗಿರುವುದರಿಂದ ಯುಗಾದಿ ಹಬ್ಬಕ್ಕೆ ಬೇವು ಬೆಲ್ಲ ವಿತರಣೆ, ಪ್ರತಿ ಸಂಕ್ರಾಂತಿ ದಿನ ನದಿ ಪಾತ್ರದಲ್ಲಿ ‘ಜಾನಪದ ಸಂಗೀತ ಸಂಕ್ರಾಂತಿ’ ಕಾರ್ಯಕ್ರಮ ಆಯೋಜಿಸಿ ಭೋಜನ ಏರ್ಪಡಿಸುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ಅಂಗವಾಗಿ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಮಹಿಳೆಯರಿಗೆ ಅರಿಷಿಣ- ಕುಂಕುಮ, ಜಾಕೆಟ್‌ ಪೀಸ್‌ದೊಂದಿಗೆ ಉಡಿ ತುಂಬುವ ಕಾರ್ಯ ಮಾಡಿದ್ದಾರೆ. ನಾಗರ ಪಂಚಮಿ ಹಬ್ಬದಲ್ಲಿ ತವರು ಮನೆ ಉಡುಗೊರೆ ಹೆಸರಿನಲ್ಲಿ ಮನೆ ಮನೆಗೂ ಉಂಡೆ ಮತ್ತು ಬಳೆ, ಜಾಕೆಟ್‌ ಪೀಸ್‌ ವಿತರಿಸಿ ಮನೆ-ಮನಗಳಲ್ಲಿ ನೆಲೆಯೂರಿದ್ದಾರೆ.

ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಾರಥ್ಯ


2018 ನವೆಂಬರ್‌ 3ರಂದು ಎಂ.ಪಿ.ರವೀಂದ್ರ ಮರೆಯಾದ ನಂತರ ಪಕ್ಷಕ್ಕೆ ಯಾರು ದಿಕ್ಕು ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿ ಹರಪನಹಳ್ಳಿ ಕಾಂಗ್ರೆಸ್‌ ಪಕ್ಷದ ಸಾರಥ್ಯ ವಹಿಸಿಕೊಂಡ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಅವರಿಗೆ ಕಾರ್ಯಕರ್ತರ ಅಭೂತಪೂರ್ವ ಸ್ವಾಗತ ದೊರೆಯಿತು. ಹಡಗಲಿ ರಸ್ತೆಯಲ್ಲಿರುವ ಎಂ.ಪಿ. ರವೀಂದ್ರರ ನಿವಾಸ ಹಾಗೂ ಕಚೇರಿ ಜನಜಂಗುಳಿಯಿಂದ ತುಂಬಿ ತುಳುಕುವಂತಾಯಿತು.

ಆರಂಭದಲ್ಲೇ ಲೋಕಸಭೆ ಚುನಾವಣೆ ಎದುರಿಸಬೇಕಾಯಿತು. ಚುನಾವಣೆ ಉಸ್ತುವಾರಿ ವಹಿಸಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿ ಹಳ್ಳಿಗೆ ಸಂಚರಿಸಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಬಿ ಮಂಜಪ್ಪ ಪರ ಮತ ಯಾಚಿಸಿದರು.
ಪಕ್ಷದ ಸಲಹೆ-ಸೂಚನೆ ಪಾಲಿಸುತ್ತ ರವಿ ಯವ ಶಕ್ತಿ ಪಡೆ ಸ್ಥಾಪಿಸಿ, ಹಳ್ಳಿಗಳಲ್ಲಿ ಸಮಿತಿ ರಚಿಸಿ ಯುವ ಸಮುದಾಯ ಸಂಘಟಿಸಿದರು. ಇವರ ಸಂಘಟನೆಯ ಚತುರತೆ ಗುರುತಿಸಿದ ಪಕ್ಷವು ಎಂ.ಪಿ. ಲತಾ ಅವರಿಗೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಸ್ಥಾನ ನೀಡಿ ಶಕ್ತಿ ತುಂಬಿತು.


ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರದಲ್ಲಿ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‌ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಚಳಗೆರೆ ಶ್ರೀಮಠ “ಸಮಾಜ ಸೇವಾ ಸಿರಿ’ ಪ್ರಶಸ್ತಿ ನೀಡಿ ಗೌರವಿಸಿದೆ.

ನನ್ನ ಕ್ಷೇತ್ರದಲ್ಲಿ ಲಾಕ್‌ಡೌನ್‌ನಿಂದ ಜನರು ದಿನ ಬಳಕೆ ವಸ್ತುಗಳಿಗಾಗಿ ಪರದಾಡಬಾರದೆಂಬ ಉದ್ದೇಶದಿಂದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಹಳ್ಳಿ ಜನರಿಗೂ ಆಹಾರ ಧಾನ್ಯ, ಮಾಸ್ಕ್ ನೀಡಿದ್ದೇವೆ. ನನ್ನ ಈ ಸೇವೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ನಾನು ಅಭಿನಂದಿಸುತ್ತೇನೆ.


– ಎಂ.ಪಿ. ಲತಾ ಮಲ್ಲಿಕಾರ್ಜುನ್‌


ಸಮಾಜ ಸೇವಾ ಸಿರಿ ಪ್ರಶಸ್ತಿ ಸ್ವೀಕಾರ.


ಜನರೊಂದಿಗೆ ಜನನಾಯಕಿ.


ನಾಗರ ಪಂಚಮಿ ಹಬ್ಬದ ಅಂಗವಾಗಿ ತವರು ಮನೆ ಉಡುಗೊರೆ ನೀಡುತ್ತಿರುವುದು.

Advertisement

Udayavani is now on Telegram. Click here to join our channel and stay updated with the latest news.

Next