Advertisement
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿ, ಯಾವುದೇ ಚುನಾವಣೆಯಲ್ಲಿ ಆಡಳಿತ ಪಕ್ಷ ತಾವು ಮಾಡಿರುವ ಸಾಧನೆ,ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಜನರಿಗೆ ತಿಳಿಸುತ್ತವೆ. ವಿರೋಧ ಪಕ್ಷ ಆಡಳಿತ ಪಕ್ಷದ ವೈಫಲ್ಯಗಳನ್ನು ಜನರ ಮುಂದಿಡುವ ಕೆಲಸ ಮಾಡುತ್ತವೆ. ಆದರೆ ಈ ಚುನಾವಣೆಯಲ್ಲಿ
ಸಾಧನೆಗಳನ್ನು ಜನರ ಮುಂದಿಡದೆ ಬೇರೆಯ ವಿಷಯಗಳಾದ ದೇಶದ ಸಮಗ್ರತೆ ಮತ್ತು ಬಲಿಷ್ಠ ನಾಯಕತ್ವ ವಿಷಯ ಪ್ರಸ್ತಾಪಿಸಿ ಜನರನ್ನು ಭಾವನಾತ್ಮಕವಾಗಿ ಪರಿವರ್ತಿಸಲಾಗುತ್ತಿದೆ ಎಂದು ಹೇಳಿದರು.
ನುಡಿದರು. ಚುನಾವಣಾ ಪ್ರಣಾಳಿಕೆಯಲ್ಲಿನ ನ್ಯಾಯ್ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ.33 ರಷ್ಟು ಮಹಿಳಾ ಮೀಸಲಾತಿಗೆ ಸಮ್ಮತಿಸಲಾಗಿದೆ. ದೇಶದಲ್ಲಿ ಖಾಲಿ ಇರುವ
24 ಲಕ್ಷ ಹುದ್ದೆಗಳನ್ನು ಭರ್ತಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ
ರೈತರನ್ನು ಋಣ ಮುಕ್ತರನ್ನಾಗಿಸುವ ವಿಷಯವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದು, ಹೊಸ ಕೃಷಿ ಆಯೋಗ ರಚನೆಗೆ ನಿರ್ಧರಿಸಲಾಗಿದೆ.
Related Articles
ಜಿಎಸ್‌ಟಿಯ ಎರಡನೆಯ ಆವೃತ್ತಿಯನ್ನು ಏಕರೂಪ ತೆರಿಗೆ ಪದ್ಧತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದೆ ಎಂದು
ನುಡಿದರು. ವನವಾಸಿಗಳನ್ನು ಒಕ್ಕಲೆಬ್ಬಿಸಿದಂತೆ ನೋಡಿಕೊಳ್ಳಲು ಈ ಹಿಂದಿರುವ ಕಾಯ್ದೆಯ ಯಥಾವತ್ ಜಾರಿಗೆ ನಿರ್ಧರಿಸಿದ್ದು, ವಸತಿ ರಹಿತರಿಗೆ ಮನೆ ಕಟ್ಟಿಕೊಡಲು ಜಾಗ ನೀಡುವುದು, ವಾಯುಮಾಲಿನ್ಯ ತಡೆಗಟ್ಟಲು ಹಾಗೂ ಪರಿಸರ ವನ್ಯಜೀವಿ ಸಂರಕ್ಷಣೆಗೆ ಒತ್ತು ನೀಡುವ ವಿಷಯ ಪ್ರಸ್ತಾಪಿಸಲಾಗಿದೆ ಎಂದರು.
Advertisement
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಜಿಎಸ್‌ಟಿ ಕೆಳಗೆ ತರುವುದು, ಉದ್ಯೋಗ ಖಾತ್ರಿ ಯೋಜನೆಯ 100 ದಿನದ ಕೆಲಸವನ್ನು 150ಕ್ಕೆ ಹೆಚ್ಚಿಸುವುದಲ್ಲದೇ ಈಗ ಕೇಂದ್ರಸರ್ಕಾರವನ್ನು ಟೀಕಿಸಿದವರಿಗೆ, ಅದರ ವಿರುದ್ಧ ಮಾತನಾಡುವವರಿಗೆ ದೇಶದ್ರೋಹದ ಹಣೆಪಟ್ಟಿ ಕಟ್ಟುತ್ತಿದ್ದು, ಆ ಕಾನೂನನ್ನು ಕಿತ್ತು ಹಾಕುವುದಾಗಿ ತಿಳಿಸಲಾಗಿದೆ. ಸಿಬಿಐ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಸ್ವಾಯತ್ತ ಸಂಸ್ಥೆಗಳಿಗೆ
ಗೌರವ ಮತ್ತು ಕಾನೂನು ರಕ್ಷಣೆ ನೀಡುವ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದು ನುಡಿದರು. ರಾಜ್ಯದಲ್ಲಿ ಯುಪಿಎ ಸರ್ಕಾರದ ಕಾರ್ಯಕ್ರಮ, ಸಿದ್ದರಾಮಯ್ಯ
ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ ಅನ್ನಭಾಗ್ಯದಿಂದ ಆರೋಗ್ಯಭಾಗ್ಯದವರೆಗಿನ ಯೋಜನೆ, ಸಮ್ಮಿಶ್ರ ಸರ್ಕಾರದ ಸಾಲಮನ್ನಾ, ಬಡವರ ಬಂಧು ಕಾರ್ಯಕ್ರಮವನ್ನು ಜನರಿಗೆ
ತಿಳಿಸಲಾಗುವುದು ಎಂದರು. ಎ.ಎನ್.ಮಹೇಶ್, ಶಿವಾನಂದಸ್ವಾಮಿ, ಅತಿಕ್ ಕೈಸರ್, ಶಿವಮೊಗ್ಗದ ಮಂಜುನಾಥ್ ಪೂಜಾರಿ, ಕ್ಷೇತ್ರ ಸಮಿತಿ ಅಧ್ಯಕ್ಷ ಹಂಪಾಪುರ ಮಂಜೇಗೌಡ ಇದ್ದರು.