ಬೆಂಗಳೂರು: ಬಿಜೆಪಿ ಪಾಳಯದಲ್ಲಿ ಚುನಾವಣ ಸಿದ್ಧತೆ ಗರಿ ಗೆದರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಕೂಡ ಚುನಾವಣೆಗೆ ಕಹಳೆ ಮೊಳಗಿಸಿದೆ.
ಪ್ರದೇಶ ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಸೋಮವಾರ ಜವಾಬ್ದಾರಿ ಸ್ವೀಕರಿಸಿದ್ದಾರೆ. ಸಮಾರಂಭವು ಕಾಂಗ್ರೆಸ್‌ನ ಚುನಾವಣ ಪ್ರಚಾರದ ಆರಂಭ ದಂತೆಯೇ ಇತ್ತು ಹಾಗೂ ರಾಜ್ಯ ಮುಖಂಡರ ಒಗ್ಗಟ್ಟು ಪ್ರದರ್ಶನಕ್ಕೂ ವೇದಿಕೆಯಾಯಿತು.
ಎಂ.ಬಿ.ಪಾಟೀಲ್ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಕರ್ನಾ ಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿ ಕಾರಕ್ಕೆ ಬರಬೇಕಾಗಿದೆ. ಅನ್ನ, ಅಕ್ಷರ, ಆರೋಗ್ಯ, ಆಶ್ರಯ ಮತ್ತು ಅಭಿವೃದ್ದಿ ಎಂಬ ಪಂಚ ಸೂತ್ರಗಳೊಂದಿಗೆ ಜನಾ ಶೀರ್ವಾದ ಪಡೆಯಲು ತೆರಳು ವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ರಷ್ಯಾ-ಉಕ್ರೇನ್ ಯುದ್ದದಿಂದ ಬೆಲೆ ಏರಿಕೆ ಸಮಸ್ಯೆ ಆಗಿಲ್ಲ: ಕತ್ತಿ
ಪ್ರಮುಖರಾದ ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೊದಲಾದವರು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.