Advertisement

ಕೆಪಿಸಿಸಿ ಅಧ್ಯಕ್ಷರೇ ಜನರಿಗೆ ತಿಂಗಳ ರೇಷನ್‌ ಕೊಡಲಿ

06:21 AM May 24, 2020 | Team Udayavani |

ಚಿಕ್ಕಬಳ್ಳಾಪುರ: ಕೋವಿಡ್‌ 19 ಸಂಕಷ್ಟದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಅನವಶ್ಯಕವಾಗಿ ಸರ್ಕಾರದ ಕ್ರಮಗಳನ್ನು ಟೀಕಿಸುತ್ತಿವೆ. ಕಾಂಗ್ರೆಸ್‌ ಪಕ್ಷದ ರಾಜ್ಯಾ ಧ್ಯಕ್ಷರಿಗೆ ಸಾಧ್ಯವಾದರೆ ರಾಜ್ಯದ ಜನರಿಗೆ ತಿಂಗಳ ಕಾಲ ಉಚಿತವಾಗಿ  ರೇಷನ್‌ ಕೊಡುವ ಕೆಲಸ ಮಾಡಲಿ, ನಾನು ಸ್ವಾಗತಿಸುತ್ತೇನೆಂದು ವೈದ್ಯ ಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು. ಜಿಲ್ಲಾ ಕೇಂದ್ರದಲ್ಲಿ ಶನಿವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಜಿಲ್ಲಾಡಳಿತ ಭವನದಲ್ಲಿ  ಅಧಿಕಾರಿಗಳ ಸಭೆ ನಡೆಸಿದ ಬಳಿಕ ತಮ್ಮನ್ನು ಭೇಟಿ ಯಾದ ಸುದ್ದಿಗಾರರೊಂದಿಗೆ ಮಾತ ನಾಡಿ, ದರು.

Advertisement

ಜಗಳ ಮಾಡಿದ್ದೆ: ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿರುವ ಕಾರ್ಮಿಕರಿಗೆಶೇ.40 ರಷ್ಟು ಸೋಂಕು ಇರುವುದು ದೃಢವಾಗುತ್ತಿದೆ.  ಕೊರೊನಾ ಸೋಂಕು ಹೆಚ್ಚು ಇರುವ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಜೂನ್‌ 1 ರವರೆಗೆ ಬರುವುದು ಬೇಡ  ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಜಿಲ್ಲೆಯ ವಲಸೆ ಕಾರ್ಮಿಕರನ್ನು ಕರೆ ತರುವ ವಿಚಾರದಲ್ಲಿ ನನ್ನ ಗಮನಕ್ಕೆ ತರದೇ ಜಿಲ್ಲೆಗೆ ಕಳುಹಿಸಿದ್ದರು. ಈ ಬಗ್ಗೆ ನಾನು ಅಧಿಕಾರಿಗಳ ಜೊತೆಗೆ ಜಗಳ ಮಾಡಿದ್ದೆ ಎಂದರು. ಜಿಲ್ಲೆಯಲ್ಲಿ  100 ರಿಂದ 120ರ ವರೆಗೂ ಸೋಂಕಿತರ ಸಂಖ್ಯೆ ಏರಿಕೆ ಕಾಣಲಿದೆ ಎಂದರು.

ಕೊರೊನಾಕ್ಕೆ ಮೃತರಾದರೆ ವಿಮೆ: ರಾಜ್ಯ ಸರ್ಕಾರ ಕೋವಿಡ್‌-19 ವಿರುದಟಛಿ ಹೋರಾಡುತ್ತಿರುವ ಆಶಾ ಕಾರ್ಯಕರ್ತರನ್ನು ಒಳಗೊಂಡಂತೆ ಆರೋಗ್ಯ ಇಲಾಖೆ, ಪೊಲೀಸ್‌ ಸಿಬ್ಬಂದಿಗೆ ವಿಮೆ ಸೌಲಭ್ಯ ಕಲ್ಪಿಸಿದೆ. ಕೊರೊನಾಗೆ ತುತ್ತಾಗಿ  ಮೃತಪಟ್ಟವರಿಗೆ ಮಾತ್ರ ಈ ವಿಮೆ ಸಿಗಲಿದೆ. ಬೇರೆ ಕಾರಣಗಳಿಗೆ ಮೃತ  ಪಟ್ಟರೆ ಕೋವಿಡ್‌-19 ವಿಮೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next