Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್ ವೈ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ವ್ಯಂಗ್ಯವಾಡಿದರು.
Related Articles
Advertisement
ಬಿಐಇಸಿ ಕೋವಿಡ್ ಕೇಂದ್ರ ದಲ್ಲಿ 10100 ಬೆಡ್ ಅಂತ ಹೇಳಿದ್ದೀರಿ. ಅಧಿಕಾರಿಗಳು 6000 ಬೆಡ್ ಅಂತ ಹೇಳಿದ್ದಾರೆ. ಇದನ್ನೂ ನಾವು ಕೇಳಬಾರದಾ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಸಾಧನೆ ಎಂದರೆ ಹಿಂದಿನ ಸರ್ಕಾರದ ಯೋಜನೆಗಳನ್ನು ರದ್ದು ಮಾಡಿದ್ದೇ ಸಾಧನೆ. ಭ್ರಷ್ಟಾಚಾರದ ಆರೋಪ ಬಂದ ತಕ್ಷಣ ಐವರು ಸಚಿವರು ಮೊದಲು 323 ಕೋಟಿ ಎಂದು ಹೇಳಿದ್ದರು. ಆ ಮೇಲೆ 2000 ಕೋಟಿ ಖರ್ಚಾಗಿದೆ ಅಂತ ಒಪ್ಪಿಕೊಂಡಿದ್ದಾರೆ. ಮಾಸ್ಕ್ ಗಳಿಗೆ 250 ರೂ. ಸ್ಯಾನಿಟೈಸರ್ ಗಳಿಗೆ 500-600 ರೂ ಹಾಕಿದ್ದಾರೆ. ಇವರ ಹಗರಣ ಇಡೀ ದೇಶದಲ್ಲಿ ಕರ್ನಾಟಕ ಬೆತ್ತಲೆಯಾಗುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಖರಿದಿ ಹಗರಣದ ಕುರಿತು ಪ್ರಧಾನಿ ಮಧ್ಯ ಪ್ರವೇಶ ಮಾಡಿ ಇಲ್ಲಿನ ಹಗರಣದ ಬಗ್ಗೆ ತನಿಖೆ ನಡೆಸಬೇಕು. ಪ್ರಧಾನಿ ಹೇಳಿದಂತೆ ಚಪ್ಪಾಳೆ ತಟ್ಟಿದ್ದೇವೆ. ದೀಪ ಹಚ್ಚಿದ್ದೇವೆ. ಆದರೆ, ಸಮಸ್ಯೆ ಮಾತ್ರ ಕಡಿಮೆಯಾಗಲಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ. ಯಾವ ಪುರುಷಾರ್ಥಕ್ಕೆ ಈ ಸರ್ಕಾರ ಎಂದರು.
ನೀವು ಆಪರೇಷನ್ ಕಮಲ, ಚುನಾವಣೆ ಗೆದ್ದಿರೋದು, ಖರಿದಿಸಿದವರಿಗೆ ಹುದ್ದೆ ಕೊಟ್ಟಿದ್ದೇನೆ ಅಂತ ಹೇಳಿಕೊಳ್ಳಿ. ಸೂತಕದಲ್ಲಿ ಸರ್ಕಾರ ಸಂಭ್ರಮ ಮಾಡಿಕೊಳ್ಳುತ್ತಿದೆ. ಜನರಿಗೆ ಧೈರ್ಯ ತುಂಬುವ ಜಾಹಿರಾತು ನೀಡಿ, ಯಾರಿಗೆ ಎಷ್ಟು ಹಣ ತಲುಪಿಸಿದ್ದೀರಾ ಜಾಹಿರಾತು ಕೊಡಿ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿಯವರ ಆರೋಪಕ್ಕೆ ಉತ್ತರಿಸಿದ ಅವರು, ಅವರಿಗೆ ನಾನು ಇವತ್ತು ಉತ್ತರ ಕೊಡಲು ಹೋಗುವುದಿಲ್ಲ. ಇವತ್ತು ನಮ್ಮ ಗುರಿ ಸರ್ಕಾರದ ಮೇಲೆ. ಕುಮಾರಸ್ವಾಮಿಯವರದು ಒಂದು ಪಕ್ಷ. ಅದು ಅವರ ಪಕ್ಷದ ಸಿದ್ದಾಂತ. ನಾವು ಹಂತ ಹಂತವಾಗಿ ಹೋರಾಟ ನಡೆಸುತ್ತೇವೆ. ಅವರ ಕಾಲದಲ್ಲಿ ಏನಾಗಿದೆ ಅಂತ ನನಗೆ ಗೊತ್ತಿದೆ. ನಾನು ಹಿಟ್ ಆಂಡ್ ರನ್ ಮಾಡುವುದಿಲ್ಲ. ನಾವು ಕೋವಿಡ್ ಸಲುವಾಗಿ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿದ್ದೇವೆ ಎಂದರು.