ಬೆಂಗಳೂರು: ಯಾರಿಗೂ ಅಧಿಕಾರ ಶಾಶ್ವತವಲ್ಲ. ಎಲ್ಲರಿಗೂ ಇದು ನೆನಪಿರಲಿ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಸರ್ಕಾರ ಬದಲಾವಣೆಯಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.
ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೊಲೀಸರ ವಿರುದ್ಧ ಕಿಡಿಕಾರಿದರು.
ಪೊಲೀಸರು ಅವರ ಬಟ್ಟೆ ಬಿಚ್ಚಿ ಬಿಜೆಪಿ ಬಟ್ಟೆ ಹಾಕಿಕೊಳ್ಳಲಿ. ಯಾವ್ಯಾವ ಪೊಲೀಸ್ ಅಧಿಕಾರಿಗಳು ಏನೇನು ಮಾಡುತ್ತಿದ್ದಾರೆಂದು ನನಗೆ ಗೊತ್ತಿದೆ. ಎಲ್ಲ ಮಾಹಿತಿ ನನ್ನ ಬಳಿ ಇದೆ ಎಂದರು.
ಗೃಹ ಸಚಿವ ಒಬ್ಬ ನಾಲಾಯಕ್. ಶಿವಮೊಗ್ಗದಲ್ಲಿ 144 ಸೆಕ್ಷನ್ ಇದ್ದರೂ ಈಶ್ವರಪ್ಪ, ಅಲ್ಲಿನ ಸಂಸದರು ರ್ಯಾಲಿ ಮಾಡುತ್ತಾರೆ. ಅಲ್ಲಿ ನಡೆದ ಗಲಾಟೆಗೆ ಅವರೇ ಕಾರಣ. ಅವರ ಮೇಲೆ ಯಾಕೆ ಇನ್ನು ಕೇಸ್ ಹಾಕಿಲ್ಲ. ಸ್ಥಳೀಯ ಶಾಸಕರಾಗಿದ್ದರೆ ಅವರ ಮನೆಗೆ ಹೋಗಬೇಕಿತ್ತು. ಸದು ಬಿಟ್ಟು ಯಾರಾದರೂ ರ್ಯಾಲಿ ಮಾಡುತ್ತೇರಾ? ಇದನ್ನು ಸರ್ಮಥನೆ ಮಾಡಿಕೊಳ್ಳುವ ಗೃಹ ಸಚಿವ ಒಬ್ಬ ನಾಲಾಯಕ್ ಎಂದು ಡಿಕೆಶಿ ಕಿಡಿಕಾರಿದರು.
ಆಯುಕ್ತರ ಮೇಲೆ ಗರಂ: ಎಲ್ಲರಿಗೂ ಒಂದೇ ಕಾನೂನು ರಾಜ್ಯದಲ್ಲಿದೆ. ಆದರೆ ನಮ್ಮ ಫ್ಲೆಕ್ಸ್, ಬ್ಯಾನರ್ ತೆಗೆಸಿದ್ದಾರೆ. ಯಡಿಯೂರಪ್ಪ ಹುಟ್ಟು ಹಬ್ಬ, ಅಶ್ವತ್ ನಾರಾಯಣ್ ಹುಟ್ಟುಹಬ್ಬ, ಸೋಮಣ್ಣ ಹುಟ್ಟುಹಬ್ಬ, ಶಿವರಾತ್ರಿ ಹಬ್ಬದ ಬೋರ್ಡ್ ಹಾಕಿದ್ದಾರೆ. ನೀವು ಬಿಬಿಎಂಪಿ ಕಚೇರಿ ಬದಲು ಬಿಜೆಪಿ ಪಾರ್ಟಿ ಅಂತ ಬೋರ್ಡ್ ಹಾಕಿಕೊಳ್ಳಿ. ಕಾನೂನು ಎಲ್ಲರಿಗೂ ಒಂದೇ ಇರಬೇಕು ಎಂದು ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಮೇಲೆ ಡಿಕೆ ಶಿವಕುಮಾರ್ ಗರಂ ಆದರು.
ಇದನ್ನೂ ಓದಿ:ಬಜೆಟ್ ಅಧಿವೇಶನ ಹಿನ್ನೆಲೆ: ಮಾ.4ರಿಂದ ಮಾ.30ವರೆಗೆ ನಿಷೇಧಾಜ್ಞೆ
ನಿಮಗಾಗಿ ಹೋರಾಟ: ಇವತ್ತಿನಿಂದದ ಬೆಂಗಳೂರುನಲ್ಲಿ ಮೂರು ದಿನ ಪಾದಯಾತ್ರೆ ಮಾಡುತ್ತಿದ್ದೇವೆ. ಟ್ರಾಫಿಕ್ ಹೆಚ್ಚಾಗುತ್ತದೆ. ಇದಕ್ಕೆ ಬೆಂಗಳೂರು ಜನರಿಗೆ ನಾನು ಕ್ಷಮೆ ಕೇಳುತ್ತೇನೆ. ನಿಮ್ಮಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಮುಂದಿನ ಮೂವತ್ತು ವರ್ಷಕ್ಕೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ. ಬೆಂಗಳೂರಿನ ಜನರ ನಮಗೆ ಸಹಕಾರ ಕೊಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.