Advertisement

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಸ್ಪರ್ಧೆ ಅನುಮಾನ: ಡಿ ಕೆ ಶಿವಕುಮಾರ್ ಹೇಳಿದ್ದೇನು?

03:04 PM Nov 16, 2020 | keerthan |

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದು, ಹೈಕಮಾಂಡ್ ಜೊತೆಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

Advertisement

ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಸಭಾ ಕ್ಷೇತ್ರ ಬಿಜೆಪಿಯಿಂದಲೇ ಖಾಲಿ ಆಗಿರುವುದು. ನಮ್ಮ ಬಳಿ ಬೇಕಾದಷ್ಟು ನಂಬರ್ ಕೂಡಾ ಇಲ್ಲ, ಎಲ್ಲವನ್ನೂ ಪರಿಗಣಿಸಿ ಹೈಕಮಾಂಡ್ ಜೊತೆಗೆ ಮಾತನಾಡಿ ಇಂದು ಸಂಜೆ ಹೇಳುತ್ತೇನೆ ಎಂದರು.

ಜೆಡಿಎಸ್ ಮತ್ತು ಬಿಜೆಪಿ ದೋಸ್ತಿ ವಿಚಾರವಾಗಿ ಮಾತನಾಡಿದ ಅವರು, ಈಗ ಏನು ಮಾತನಾಡುವುದಿಲ್ಲ. ಮುಂದಿನ ಫಲಿತಾಂಶ ನೋಡಿ ರಾಜಕೀಯ ಬೆಳವಣಿಗೆ ನೋಡಿ ಮಾತನಾಡುತ್ತೇನೆ ಎಂದರು.

ಮರಾಠ ಪ್ರಾಧಿಕಾರ ರಚನೆಯ ಬಗ್ಗೆ ಪ್ರತಿಕ್ರಯಿಸಿದ ಅವರು ನಮ್ಮ ರಾಜ್ಯದಲ್ಲಿರುವ ಜನರಿಗೆ ಕೊಡಬಾರದು ಎಂದೇನಿಲ್ಲ. ಆದರೆ ಅವರನ್ನು ಯಾಕೆ ಪ್ರತ್ಯೇಕವಾಗಿ ನೋಡ್ತಿರಾ? ಮೊದಲು ನಾವು ಅವರಿಗೆ ಸಹಾಯ ಮಾಡಿಲ್ವಾ? ಯಾಕೆ ಸಮಾಜ ಒಡೆಯೋ ಕೆಲಸ ಮಾಡ ಬೇಕು ಎಂದರು.

ಉಪಚುನಾವಣೆ: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಎಂ.ಬಿ.ಪಾಟಿಲ್ ಹಾಗೂ ಬಸವಕಲ್ಯಾಣ ಮತ್ತು ಮಸ್ಕಿಗೆ ಈಶ್ವರ ಖಂಡ್ರೆ ಹಾಗೂ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಸಮಿತಿ ವರದಿ ಬಂದ ನಂತರ ನೋಡೋಣ ಎಂದರು.

Advertisement

ಉಪ ಚುನಾವಣೆಯಿಂದ ಜೆಡಿಎಸ್ ದೂರ ಉಳಿಯುವ ಸುದ್ದಿಯ ಬಗ್ಗೆ ಮಾತನಾಡಿದ ಅವರು, ಈ ವಿಚಾರ ಅಧಿಕೃತವಾಗಿ ಘೋಷಣೆ ಆಗುವ ಮೊದಲು ನಾನು ಏನು ಮಾತನಾಡೋದಿಲ್ಲ. ಇದರಿಂದ ಆ ಪಕ್ಷಕ್ಕೆ ಏನೋ ಲಾಭ ಇರುತ್ತೆ, ನಾನು ಯಾಕೆ ಮಾತನಾಡಲಿ ಎಂದರು.

ಸಾರಿಗೆ ನೌಕರರಿಗೆ ಸಂಬಳ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಸುರೇಶ್ ಕುಮಾರ್ ಸಾಹೇಬ್ರು ಶಿಕ್ಷಕರಿಗೆ ಸಂಬಳ ಕೊಡಿ ಅಂತಿದ್ದಾರೆ. ಶಾಲಾ ಫೀಸ್ ತಗೋ ಬೇಡಿ ಎನ್ನುತ್ತಿದ್ದಾರೆ, ಇತ್ತ ಸಾರಿಗೆ ಇಲಾಖೆಗೂ ಸಂಬಳ ಆಗಿಲ್ಲ. ಸರ್ಕಾರ ಸಾರಿಗೆ ನೌಕರರಿಗೆ ಸಂಬಳ ಕೊಡಬೇಕು. ಕೇಂದ್ರ ಸರ್ಕಾರದಿಂದ ಲಾಭ ಪಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಕೇಂದ್ರದ ಬಳಿ ನಮ್ಮನ್ನು ಕರ್ಕೊಂಡು ಹೋದರೆ ನಾವಾದರೂ ಮಾತನಾಡ್ತಿವಿ, ಕೇಂದ್ರದಿಂದ ಪಶ್ಚಿಮ ಬಂಗಾಳಕ್ಕೆ ಹಣ ನೀಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next