ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‌ನ 13 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿ ಮೈತ್ರಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿಸಿರುವ ವೇಳೆ ರಾಜ್ಯ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊಹಮ್ಮದ್ ಬಿನ್ ತೊಘಲಕ್ ಗೆ ಹೋಲಿಕೆ ಮಾಡಿದೆ.
ಕಟು ವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ,
ಮೊಹಮ್ಮದ್ ಬಿನ್ ತೊಘಲಕ್ ನಂತರ…
ಈ ಭಾರತವನ್ನು ಆಳುತ್ತಿರುವ…
ಅದೇ ಗುಣಗಳುಳ್ಳ ವ್ಯಕ್ತಿ, ನರೇಂದ್ರ ಮೋದಿ!
ನೈತಿಕತೆ ಮತ್ತು ಮೌಲ್ಯ ಹೀನ ರಾಜಕಾರಣಿ.
ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟು 10 ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿದ್ದಾರೆ. ಕರ್ನಾಟಕವು ಮೋದಿಯ ಸಂಚಿಗೆ ಬಲಿಯಾಗಬಾರದು. ಎಂದು ಬರೆದಿದೆ.
ರಾಜೀನಾಮೆ ನೀಡಿದ 13 ಮಂದಿ ಶಾಸಕರ ಪೈಕಿ 11 ಮಂದಿ ಮುಂಬಯಿಯ ಹೊಟೇಲ್‌ನಲ್ಲಿ ತಂಗಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಸರ್ಕಾರ ಉಳಿಸಿಕೊಳ್ಳುವುದು ಮತ್ತು ರಾಜೀನಾಮೆ ನೀಡಿದ ಶಾಸಕರನ್ನುವಾಪಾಸ್ ಕರೆಸಿಕೊಳ್ಳುವ ಶತ ಪ್ರಯತ್ನಗಳನ್ನು ಹಿರಿಯ ನಾಯಕರು ಮಾಡುತ್ತಿದ್ದಾರೆ.