Advertisement

ಇಂದಿನಿಂದ ಕೋವಿಂದ್‌ ರಾಷ್ಟ್ರ ಪ್ರವಾಸ ಆರಂಭ

03:45 AM Jun 25, 2017 | |

ಲಕ್ನೋ/ಹೊಸದಿಲ್ಲಿ: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್‌ ಕೋವಿಂದ್‌ ಅವರು ರವಿವಾರದಿಂದ ತಮ್ಮ ರಾಷ್ಟ್ರಪ್ರವಾಸ ಆರಂಭಿಸಲಿದ್ದಾರೆ. ಎಲೆಕ್ಟೋ ರಲ್‌ ಕಾಲೇಜಿನ ಅತಿ ಹೆಚ್ಚು ಮತಗಳನ್ನು ಹೊಂದಿರುವ ಉತ್ತರ ಪ್ರದೇಶದಿಂದಲೇ ಕೋವಿಂದ್‌ ಅವರು ತಮ್ಮ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ.

Advertisement

ಅವರು ದೇಶವ್ಯಾಪಿ ಪ್ರವಾಸ ಮಾಡಿ ಲೋಕಸಭೆ, ರಾಜ್ಯಸಭೆ, ರಾಜ್ಯಗಳು, ಕೇಂದ್ರಾ ಡಳಿತ ಪ್ರದೇಶಗಳ ಚುನಾಯಿತ ಪ್ರತಿನಿಧಿ ಗಳನ್ನು ಭೇಟಿ ಮಾಡಿ ತಮಗೆ ಮತ ಹಾಕುವಂತೆ ಮನವಿ ಮಾಡಲಿದ್ದಾರೆ. ಇದೇ ವೇಳೆ, ವಿಪಕ್ಷ ಗಳ ರಾಷ್ಟ್ರಪತಿ ಅಭ್ಯರ್ಥಿ  ಮೀರಾಕುಮಾರ್‌ ಅವರೂ ರವಿವಾರ ಲಕ್ನೋಗೆ ಆಗಮಿಸ ಲಿದ್ದು, ಅವರೂ ಕೋವಿಂದ್‌ ಮಾದರಿಯಲ್ಲೇ ಮತ ಯಾಚಿಸುವ ಸಾಧ್ಯತೆಯಿದೆ. ಮೀರಾಕುಮಾರ್‌ಗೆ ಕಾಂಗ್ರೆಸ್‌ ನಾಯಕರಾದ ಗುಲಾಂ ನಬಿ ಆಜಾದ್‌ ಅವರು ಸಾಥ್‌ ನೀಡಲಿದ್ದಾರೆ.

ಇನ್ನೊಂದೆಡೆ, ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಚುನಾವಣೆಗಾಗಿ ವಿಶೇಷವಾದ ಪೆನ್‌ ಮತ್ತು ಶಾಯಿಯನ್ನು ಬಳಕೆ ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಈ ಪೆನ್‌ ಹಾಗೂ ಶಾಯಿಯನ್ನು ದಿಲ್ಲಿಯಿಂದ ಲಕ್ನೋಗೆ ತರಿಸ ಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿತೀಶ್‌ ಮತ್ತೆ ಎನ್‌ಡಿಎ ಸೇರಲಿ
ರಾಷ್ಟ್ರಪತಿ ಚುನಾವಣೆಯಲ್ಲಿ ಕೋವಿಂದ್‌ ಅವರಿಗೆ ಬೆಂಬಲ ನೀಡುವ ತಮ್ಮ ನಿಲುವಿಗೆ ಬದ್ಧವಾದ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರನ್ನು ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಶ್ಲಾ ಸಿದ್ದಾರೆ. ಅಲ್ಲದೆ, ನಿತೀಶ್‌ ಅವರನ್ನು ಮತ್ತೆ ಎನ್‌ಡಿಎಗೆ ಸೇರುವಂತೆಯೂ ಆಹ್ವಾನಿಸಿದ್ದಾರೆ. “ಬಿಹಾರದ ಮಗಳು ಮೀರಾಕುಮಾರ್‌ರನ್ನು ಪ್ರತಿಪಕ್ಷಗಳು ಹರಕೆಯ ಕುರಿಯಾಗಿಸಲು ಹೊರಟಿವೆ ಎಂಬ ನಿತೀಶ್‌ ಮಾತು ಸರಿಯಾದದ್ದು. ಈಗ ನಿತೀಶ್‌ ಅವರು ಎರಡು ದೋಣಿ ಗಳ ಮೇಲೆ ಕಾಲಿಡಬಾರದು. ಆದಷ್ಟು ಬೇಗ ಅವರು ಎನ್‌ಡಿಎಗೆ ಸೇರ್ಪಡೆ ಗೊಳ್ಳಬೇಕು,’ ಎಂದಿದ್ದಾರೆ ಪಾಸ್ವಾನ್‌.

ರಾಷ್ಟ್ರಪತಿಯಾದವರಿಗೆ ಇರಬೇಕಾದ್ದು ಒಂದೇ ಒಂದು ಸಿದ್ಧಾಂತ- ಅದು ಭಾರತದ ಸಂವಿಧಾನ. ಹುದ್ದೆಯ ಘನತೆ ಕಾಪಾಡುವುದು ಮತ್ತು ಸಂವಿಧಾನವನ್ನು ಅನುಸರಿಸುವುದು. ಇಲ್ಲಿ ಸೈದ್ಧಾಂತಿಕ ಹೋರಾಟದ ಪ್ರಶ್ನೆಯೇ ಉದ್ಭವಿಸಬಾರದು.
– ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

Advertisement

ಜು.17ರಿಂದ ಅಧಿವೇಶನ
ರಾಷ್ಟ್ರಪತಿ ಚುನಾವಣೆ ನಡೆವ ದಿನವೇ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಜು.17ರಿಂದ ಆ. 11ರ ವರೆಗೆ ಅಧಿವೇಶನ ನಡೆಸುವಂತೆ ಸಂಸ ದೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಶಿಫಾರಸು ಮಾಡಿದೆ. ಪ್ರತಿ ವರ್ಷವೂ ಜುಲೈ ಅಂತ್ಯದಲ್ಲಿ ಅಧಿವೇಶನ ನಡೆಸಲಾಗುತ್ತದೆ ಯಾದರೂ ಈ ಬಾರಿ ರಾಷ್ಟ್ರಪತಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಅಧಿವೇಶನವನ್ನು ಸ್ವಲ್ಪ ಮುಂಚಿತವಾಗಿ ನಡೆಸಲು ನಿರ್ಧರಿಸಲಾಗಿದೆ. ಜು.17ರಂದೇ ಅಧಿವೇಶನ ಆರಂಭಿಸುವ ಮೂಲಕ ಎಲ್ಲ 776 ಸದಸ್ಯರೂ ದಿಲ್ಲಿ ಯಲ್ಲಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲಿ ಎಂಬುದೂ ಸರಕಾರದ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಆದರೂ ಸಂಸದರು ಮಾತ್ರ ತಮ್ಮ ತಮ್ಮ ರಾಜ್ಯಗಳಲ್ಲಿ ಇದ್ದುಕೊಂಡೇ ಮತ ಚಲಾಯಿಸಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next