Advertisement

ಲಾಕ್‌ಡೌನ್‌ ಸಡಿಲ ಬಳಿಕ ಸೌದಿಯಲ್ಲೂ ಕೋವಿಡ್‌ ಏರಿಕೆ

02:11 PM Jul 06, 2020 | mahesh |

ದುಬಾೖ: ಲಾಕ್‌ಡೌನ್‌ ಸಡಿಲಿಕೆ ಬಳಿಕ ಸೌದಿ ಅರೇಬಿಯಾದಲ್ಲೂ ಕೋವಿಡ್‌ ಪ್ರಕರಣಗಳು ತೀವ ಏರಿಕೆ ಕಂಡಿವೆ. ಅಲ್ಲೀಗ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕೇರಿದ್ದು, ದಿನವೊಂದರಲ್ಲಿ ಸಾವಿಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಆಡಳಿತಕ್ಕೆ ತಲೆನೋವು ತಂದಿದೆ.  ಕಳೆದ ತಿಂಗಳು ಲಾಕ್‌ಡೌನ್‌ ಅನ್ನು ಸಂಪೂರ್ಣ ಸಡಿಲಗೊಳಿಸಲಾಗಿದ್ದು, ಕೆಲವೊಂದು ನಿಯಮಗಳನ್ನು ಮಾತ್ರ ಜಾರಿಗೊಳಿಸಲಾಗಿತ್ತು. ವಿಶ್ವದ ವಿವಿಧ ದೇಶಗಳು ಲಾಕ್‌ಡೌನ್‌ ತೆರವುಗೊಳಿಸಿದದಂತೆಯೇ ಸೌದಿ ಕೂಡ ಇದೇ ಕ್ರಮವನ್ನನುಸರಿಸಿತ್ತು.

Advertisement

ಗಲ್ಫ್ ದೇಶಗಳಲ್ಲಿ ಕುವೈಟ್‌ ಮಾತ್ರ ಭಾಗಶಃ ಕರ್ಫ್ಯೂ ವಿಧಿಸಿದ್ದರೆ, ಒಮಾನ್‌, ಬಹ್ರೈನ್‌, ಖತಾರ್‌ ದೇಶಗಳು ಲಾಕ್‌ಡೌನ್‌ ಹೇರಿರಲಿಲ್ಲ. ಗಲ್ಫ್ ದೇಶಗಳಲ್ಲಿ ಸೌದಿಯಲ್ಲೇ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ ಮತ್ತು ಶನಿವಾರ ಇಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದರೆ ಒಟ್ಟು ಪ್ರಕರಣಗಳ ಸಂಖ್ಯೆ 205929 ಆಗಿದೆ. ಒಟ್ಟು ಸಾವಿನ ಸಂಖ್ಯೆ 1858 ಆಗಿದೆ. ಜೂನ್‌ ಮಧ್ಯದಲ್ಲಿ ದಿನದ ಸಾವಿನ ಪ್ರಮಾಣ 4 ಸಾವಿರದವರೆಗೆ ಏರಿಕೆಯಾಗಿದ್ದು ಬಳಿಕ ಇಳಿಕೆಯಾಗಿತ್ತು.

ಲಾಕ್‌ಡೌನ್‌ ಸಡಿಲಿಕೆ ಬಳಿಕ ದುಬಾೖನಲ್ಲಿ ಮಾತ್ರ ವಿದೇಶೀಯರಿಗೆ, ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗಿತ್ತು. ಇದರೊಂದಿಗೆ ಸೌದಿಯ ಎಲ್ಲ ಕಡೆಗಳಲ್ಲಿ ಮುಕ್ತ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪ್ರಕರಣಗಳ ಸಂಖ್ಯೆ ಏರಿಕೆಗೆ ಇದುವೇ ಕಾರಣ ಎಂದು ಇದೀಗ ಹೇಳಲಾಗಿದೆ.

ಯುಎಇನಲ್ಲೂ ಏರಿಕೆ
ಯುಎಇನಲ್ಲಿ ದಿನದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ, ಹಲವು ಕಡೆಗಳಲ್ಲಿ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಹಿಂದೆ 1 ಸಾವಿರ ವರೆಗೆ ಪ್ರಕರಣಗಳು ಪತ್ತೆಯಾಗುತ್ತಿದ್ದರೆ, ಈಗ ಅದು 300-400ಕ್ಕೇರಿದೆ. ಒಟ್ಟು ಪ್ರಕರಣಗಳು 50857ಕ್ಕೇರಿದೆ. ಜತೆಗ 321 ಮಂದಿ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next