Advertisement

ಚೀನದಲ್ಲಿ ಕೋವಿಡ್‌ ಭೀತಿ : ನಾಯಿ ಮಾಂಸ ಜಾತ್ರೆ ನಿರಾತಂಕ!

11:57 AM Jun 24, 2020 | mahesh |

ಬೀಜಿಂಗ್‌: ಕೋವಿಡ್‌ ವೈರಸ್‌ ಚೀನದಲ್ಲಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದರೂ ಅಲ್ಲಿನವರು ವನ್ಯ ಪ್ರಾಣಿಗಳು ಸೇರಿದಂತೆ ಇತರ ಪ್ರಾಣಿಗಳ ಮಾಂಸವನ್ನು ತಿನ್ನುವುದನ್ನು ಬಿಟ್ಟಿಲ್ಲ. ದಕ್ಷಿಣ ಚೀನದಲ್ಲೀಗ ನಾಯಿ ಮಾಂಸ ಜಾತ್ರೆ ನಡೆಯುತ್ತಿದ್ದು ಕೋವಿಡ್‌ಗೆ ಕ್ಯಾರೇ ಅಂದಿಲ್ಲ. ಕೋವಿಡ್‌ ಹಬ್ಬುತ್ತಿರುವುದರಿಂದ ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ವನ್ಯಪ್ರಾಣಿಗಳು ಸೇರಿದಂತೆ ನಾಯಿ ಇತ್ಯಾದಿ ಪ್ರಾಣಿಗಳ ಮಾಂಸವನ್ನು ತಿನ್ನದೇ ಇರುವಂತೆ ಜನರಿಗೆ ಸಲಹೆ ನೀಡಿದ್ದಾರೆ. ಆದರೆ ಯುಲಿನ್‌ ಸಿಟಿಯಲ್ಲಿ ನಡೆಯುವ ಪ್ರಸಿದ್ಧ ನಾಯಿ ಮಾಂಸ ಜಾತ್ರೆ ನಡೆದಿದೆ.

Advertisement

ಇನ್ನು ಈ ಜಾತ್ರೆ ವರ್ಷವೂ ಪ್ರಾಣಿ ಹಕ್ಕು ಕಾರ್ಯಕರ್ತರ ಪ್ರತಿಭಟನೆ, ನಾಯಿಗಳ ಸಂರಕ್ಷಣೆಗೆ ಸಾಕ್ಷಿಯಾಗುತ್ತದೆ. ಚೀನದ ಹಲವು ಪ್ರಾಂತ್ಯಗಳಲ್ಲಿ ನಾಯಿ ಮಾಂಸ ತಿನ್ನುವುದು ಒಳ್ಳೆಯದು ಎಂಬ ಭಾವನೆ ಜನರಲ್ಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಮಂದಿ ಶ್ರೀಮಂತರು ನಾಯಿ ಸಾಕುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡ ಬಳಿಕ ನಾಯಿಗಳ ಹತ್ಯೆ ತುಸು ಇಳಿಕೆಯಾಗಿದೆ.

ಇದರೊಂದಿಗೆ ಎಪ್ರಿಲ್‌ನಲ್ಲಿ ಶೆನ್‌ಝೆನ್‌ ಮತ್ತು ಝಹಾಯಿ ಪ್ರಾಂತ್ಯದಲ್ಲಿ ವನ್ಯಪ್ರಾಣಿ ಮಾಂಸಗಳೊಂದಿಗೆ ನಾಯಿ ಮಾಂಸ ತಿನ್ನುವುದನ್ನೂ ನಿಷೇಧಿಸಲಾಗಿತ್ತು.
ನಾಯಿ ಮಾಂಸ ತಿನ್ನುವುದನ್ನು ಕಡಿಮೆ ಮಾಡುವಂತೆ ಮಾಡುವ ನಿಟ್ಟಿನಲ್ಲಿ ಕಳೆದ ತಿಂಗಳು ಕೃಷಿ ಇಲಾಖೆ ಅವುಗಳನ್ನು ತಿನ್ನುವ ಮಾಂಸದ ಸಾಲಿನಿಂದ ಕೈಬಿಟ್ಟಿದ್ದು ನಾಯಿಗಳು ಮನುಷ್ಯನಿಗೆ ಸಾಕು ಪ್ರಾಣಿಯಾಗಬಲ್ಲ ಪ್ರಾಣಿಗಳು ಎಂದು ಹೇಳಿತ್ತು. ಚೀನಾದ ನಾಯಿ ಮಾಂಸ ಜಾತ್ರೆಗೆ ದೇಶಾಂದ್ಯಂತ ವಿವಿಧ ಟ್ರಕ್‌ಗಳಲ್ಲಿ ನಾಯಿಗಳನ್ನು ಹೇರಿಕೊಂಡು ಬರಲಾಗುತ್ತದೆ. ಗ್ರಾಹಕರು ವಿವಿಧ ನಾಯಿಗಳನ್ನು ಆರಿಸಿ, ಮಾಂಸಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ನಾಯಿ ಮಾಂಸ ಜಾತ್ರೆಗೆ ಸಾವಿರಾರು ಮಂದಿ ಆಗಮಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next