Advertisement

ಕೋವಿ ಅಡಮಾನಿಗೆ ಹಣಪಡೆಯುವಂತಿಲ್ಲ: ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾವಿಸಿದ ಅಶೋಕ್‌ ರೈ

11:15 PM Jul 11, 2023 | Team Udayavani |

ಬೆಂಗಳೂರು: ಚುನಾವಣ ನೀತಿ ಸಂಹಿತೆ ವೇಳೆ ರೈತರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಪೊಲೀಸ್‌ ಠಾಣೆಯಲ್ಲಿ ಜಮೆ ಮಾಡುವ ವಿಚಾರವಿಂದು ವಿಧಾನ
ಸಭೆಯಲ್ಲಿ ಗಹನವಾದ ಚರ್ಚೆಗೆ ನಾಂದಿ ಹಾಡಿತು.

Advertisement

ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾವಿಸಿದ ಶಾಸಕ ಅಶೋಕ್‌ ಕುಮಾರ್‌ ರೈ, ಬೆಳೆದ ಬೆಳೆಗಳನ್ನು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ರೈತರಿಗೆ ಕೋವಿ ನೀಡಲಾಗಿದೆ. ಆದರೆ, ಚುನಾವಣ ನೀತಿ ಸಂಹಿತೆ ವೇಳೆ 200 ರೂ. ಠೇವಣಿ ಇರಿಸಿಕೊಂಡು ಕೋವಿಗಳನ್ನು ಪೊಲೀಸ್‌ ಠಾಣೆಯಲ್ಲಿ ಇಟ್ಟುಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಸಮಸ್ಯೆಗಳಾಗುತ್ತಿವೆ ಎಂದು ಗಮನ ಸೆಳೆದರು.

ಕೋವಿಗೂ ಹೆದರದ ಮಂಗಗಳು
ಉಡುಪಿ, ದ.ಕ. ಜಿಲ್ಲೆಗಳಲ್ಲಿ 11 ಸಾವಿರ ಕೋವಿಗಳಿಗೆ ಪರವಾನಗಿ ಇವೆ. ನ್ಯೂ ಜನರೇಶನ್‌ ಮಂಗಗಳು ಕೋವಿಗೂ ಹೆದರುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಪಂಚಾಯತ್‌, ಸ್ಥಳೀಯ ಸಂಸ್ಥೆ, ವಿಧಾನಸಭೆ, ಲೋಕಸಭೆ ಎನ್ನುತ್ತ ವರ್ಷದಲ್ಲಿ 2-3 ಚುನಾವಣೆಗಳು ಬರುತ್ತವೆ. ಚುನಾವಣೆ ಬಂದಾಗಲೆಲ್ಲ ಇವನ್ನು ಠಾಣೆಯಲ್ಲಿಟ್ಟು 200 ರೂ. ಕಟ್ಟುತ್ತಿದ್ದೇವೆ. ಹೀಗೇ ಆದರೆ ಬೆಳೆ ರಕ್ಷಣೆ ಹೇಗೆ? ಎಂದು ಪ್ರಶ್ನಿಸಿದರು.

200 ರೂ. ಠೇವಣಿ ಇಡುವ ಅಗತ್ಯವಿಲ್ಲ: ಚುನಾವಣೆ ವೇಳೆ ಶಸ್ತ್ರಾಸ್ತ್ರಗಳನ್ನು ಪೊಲೀಸರ ವಶಕ್ಕೆ ನೀಡುವುದು ಹಿಂದಿನಿಂದಲೂ ಇರುವ ನಿಯಮ. ಆದರೆ, 200 ರೂ. ಠೇವಣಿ ಇಡಬೇಕೆಂದು ಇಲ್ಲ. ಹಾಗೇನಾದರೂ ಯಾರಾದರೂ ಪೊಲೀಸರು ಹಣ ಪಡೆದ ಬಗ್ಗೆ

ನಿರ್ದಿಷ್ಟ ಪ್ರಕರಣಗಳಿದ್ದರೆ ಕ್ರಮ ಜರಗಿಸಲಾಗುತ್ತದೆ. ತುರ್ತು ಮತ್ತು ಅನಿವಾರ್ಯ ಇದ್ದಾಗ ಚುನಾವಣೆ ಸಂದರ್ಭದಲ್ಲೂ ಶಸ್ತ್ರಾಸ್ತ್ರಗಳನ್ನು ಪರವಾನಗಿ
ಹೊಂದಿದವರು ತಮ್ಮ ಬಳಿ ಇಟ್ಟುಕೊಳ್ಳಲು ಅವಕಾಶವಿದೆ. ಎಕ್ಷಂಪ್ಸನ್‌ ಕಮಿಟಿ (ವಿನಾಯಿತಿ ಸಮಿತಿ) ಮುಂದೆ ಅರ್ಜಿ ಸಲ್ಲಿಸಿ, ಶಸ್ತ್ರಾಸ್ತ್ರಗಳನ್ನು ಜಮೆ ಮಾಡುವುದರಿಂದ ವಿನಾಯಿತಿ ಪಡೆಯಬಹುದಾಗಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next