ಕೊಟ್ಟೂರು: ಸಮೀಪದ ಹಳ್ಳಗಳು ಹಾಗೂ ಕೆರೆ ಈಗ ನೀರಿಲ್ಲದೆ ಭಣಗುಡುತ್ತಿವೆ. ಕಾರಣ ಮರಳು ದಂಧೆ ಎಂದರೆ ತಪ್ಪಾಗಲಾರದು. ತಾಲೂಕಿನ ವ್ಯಾಪ್ತಿಗೆ ಬರುತ್ತಿರುವ ಹಳ್ಳಿಗಳು ಹಾಗೂ ಕೆರೆ ಹಳ್ಳಗಳು ಒಡ್ಡುಗಳು, ಮರುಳು ದಂಧೆಗೆ ಅಹುತಿಯಾಗಿದೆ. ಇಲ್ಲಿನ ರಾಂಪುರದಿಂದ ಬರುವ ಹಳ್ಳಗಳ ಮುಖಾಂತರ ನೀರು ಹರಿಯುವ ಜಾಗದಲ್ಲಿ ತಗ್ಗು ತೋಡಿ ಮರಳು ದಂಧೆಗೆ ಮುಂದಾಗಿದ್ದವರನ್ನು ತಡೆದು ಇಲ್ಲಿನ ಅಧಿಕಾರಿಗಳು ಕಡಿವಾಣ ಹಾಕಿದರು. ಆದರೆ ಈ ಕಡಿವಾಣದಿಂದ ಬಡವರಿಗೆ ಹಾಗೂ ಕೂಲಿ ಕಾರ್ಮಿಕರ ಮನೆ ನಿರ್ಮಾಣಕ್ಕೆ ಮರುಳು ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ.
Advertisement
ಸ್ಟಾಕ್ ಯಾರ್ಡ್‌ನಿಂದ ಬರುವ ಮರಳಿಗೆ ಒಂದು ಲೋಡ್‌ಗೆ 22-23 ಸಾವಿರ ರೂ. ಕೇಳುತ್ತಾರೆ. ಇದಕ್ಕೆ ಅವರಿಂದ ಸರ್ಕಾರ ನಿಗದಿಗೊಳಿಸಿದ ಮೊತ್ತ ತೋರಿಸುತ್ತಾರೆ. ಈ ರೀತಿಯ ಅತಿ ಹೆಚ್ಚಿನ ದರದಲ್ಲಿರುವ ಮರಳನ್ನು ಬಡವರು ಕೊಂಡುಕೊಂಡು ಮನೆ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ. ಸರ್ಕಾರ ಈಗಲೇ ಎಚ್ಚೆತ್ತು ಒಂದು ಲೋಡ್‌ಗೆ ಬಡವರಿಗೆ ಎಟಕುವ ದರದಲ್ಲಿ ಮರಳನ್ನು ನೀಡಿ ಬಡವರು ಸ್ವಂತ ಮನೆಯಲ್ಲಿ ಜೀವಿಸುವಂತೆ ಮಾಡಬೇಕು. ಇಲ್ಲಿರುವ ಆಶ್ರಯ ಯೋಜನೆಗಳ ಮನೆಗಳ ನಿರ್ಮಾಣಕ್ಕೆ ಕೊಡುವ ಸರ್ಕಾರದ ಯೋಜನೆಯಲ್ಲಿ ಮೊತ್ತ ಕೇವಲ 3,00,000 ರೂ. ಆದರೆ ಮರಳು ಖರಿದಿಗಾಗೊಯೇ 1,00,000 ಲಕ್ಷ ರೂ. ಆಗುತ್ತದೆ. ಇದರಿಂದ ಸರ್ಕಾರ ಮರಳನ್ನಾದರೂ ಕಡಿಮೆ ಬೆಲೆ ನಿಗದಿ ಮಾಡಬೇಕು. ಸರ್ಕಾರ ನೀಡುವ ಮೊತ್ತವನ್ನಾದರೂ ಹೆಚ್ಚಿಸಬೇಕು ಎಂಬುದು ಇಲ್ಲಿನ ಸಾರ್ವಜನಿಕರ ಅಳಲು.
ಇದರಂತೆ ಆದಷ್ಟು ಬೇಗನೆ ಸ್ಟಾಕ್‌ಯಾರ್ಡ್‌ನಿಂದ ಬರುವ ಮರಳನ್ನು ಕಡಿಮೆ ದರದಲ್ಲಿ ಬಡವರಿಗೆ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಸೂಚಿಸುತ್ತೇನೆ.
ಅನಿಲಕುಮಾರ,
ದಂಡಾಧಿಕಾರಿಗಳು, ಕೊಟ್ಟೂರು.