Advertisement
ಚಾರ್ಮಾಡಿ ಘಾಟ್ ಭಾಗದಿಂದ ಕೊಟ್ಟಿಗೆಹಾರಕ್ಕೆ ಬರುವಾಗ ನೇರ ಇಳಿಜಾರು ರಸ್ತೆಯಿದ್ದು ಬರುವ ವಾಹನಗಳು ಹೋಟೆಲ್ ಬಳಿ ತಿರುವಿನಲ್ಲಿ ಮುಗ್ಗರಿಸಿ ಪಲ್ಟಿ ಹೊಡೆಯುತ್ತಿವೆ.ಇದರಿಂದ ಅನೇಕ ಪ್ರವಾಸಿಗರು ಅಪಘಾತಕ್ಕೀಡಾಗಿದ್ದಾರೆ.ಕೊಟ್ಟಿಗೆಹಾರದಿಂದ 50ಮೀ ಅಂತರದ ಎರಡು ತಿರುವುಗಳು ಜನರ ಪಾಲಿನ ಮೃತ್ಯುಕೂಪಗಳಾಗಿವೆ.ಇತ್ತೀಚೆಗೆ ಗ್ಯಾಸ್ ಲಾರಿ ಹಾಗೂ ಎಳನೀರು ಲಾರಿ ಅಪಘಾತವಾಗಿತ್ತು.ಈ ಹಿಂದೆ ಹಲವು ದ್ವಿಚಕ್ರ ಸವಾರರು, ಹಲವು ಪ್ರವಾಸಿಗರು ಈ ನೇರ ರಸ್ತೆಯಲ್ಲಿ ವೇಗವಾಗಿ ಬಂದು ರಸ್ತೆಯ ಕೊನೆಯಲ್ಲಿ ಹಿಮ್ಮುರಿ ತಿರುವು ತರಹ ತಿರುವು ಇರುವುದರಿಂದ ದರ್ಬಾರ್ ಹೋಟೆಲ್ ಬಳಿ ಹಾಗೂ ತರುವೆ ಗ್ರಾಮಕ್ಕೆ ತಿರುಗುವ ರಸ್ತೆ ಬಳಿ ತಿರುವುಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಿರುವುಗಳನ್ನು ನೇರ ಮಾಡಿ ಅಪಘಾತ ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
—-ಸಂಜಯ್ ಗೌಡ, ಸಮಾಜ ಸೇವಕ, ಕೊಟ್ಟಿಗೆಹಾರ