Advertisement

ಕೊಟ್ಟಾರ: ಆಟಿಡೊಂಜಿ ದಿನ, ಸಾಧಕರಿಗೆ ಸಮ್ಮಾನ

08:00 AM Aug 11, 2017 | |

ಕೊಟ್ಟಾರ:  ಪತಂಜಲಿ ಯೋಗ ಪೀಠ ಮತ್ತು ಭಾರತೀಯ ಸ್ವಾಭಿಮಾನ ಟ್ರಸ್ಟ್‌ ವತಿಯಿಂದ ಆಟಿಡೊಂಜಿ ದಿನ ಕೊಟ್ಟಾರದಲ್ಲಿ ನಡೆಯಿತು.

Advertisement

ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯಅಕಾಡೆಮಿ ಮಾಜಿ ಸದಸ್ಯ ದಯಾನಂದ ಕತ್ತಲ್‌ಸಾರ್‌ ಮಾತನಾಡಿ, ಅಂದಿನ ಆಟಿ ತಿಂಗಳು ಕಷ್ಟದ ದಿನವಾದರೂ ತುಳುನಾಡಿನ ಸಂಸ್ಕೃತಿಯ ಸಂಪನ್ನತೆಯನ್ನು ಬೆಳೆಸಿದರು. ಪ್ರಕೃತಿದತ್ತವಾದ ಎಲೆ, ಗಡ್ಡೆ ಗೆಣಸುಗಳನ್ನು ತಿನ್ನುತ್ತಿದ್ದರು. ಆದ್ದರಿಂದಲೇ ಅವರು ಹೆಚ್ಚು ವರ್ಷಗಳ ಕಾಲ ಬದುಕುತ್ತಿದ್ದರು ಎಂದು ಹೇಳಿದರು.

ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಎಂ. ಜಗದೀಶ ಶೆಟ್ಟಿ ಮಾತನಾಡಿ, ಆಟಿ ತುಳುನಾಡಿನ ಆಚಾರ, ವಿಚಾರಗಳನ್ನು ನೆನಪಿಸುವ ಸುಂದರ ಹಬ್ಬ. ಇಂತಹ ಆಚರಣೆಗಳ ಮೂಲಕ ನಮ್ಮ ಹಿರಿಯರು ಬದುಕಿದ ರೀತಿಯ ಬಗ್ಗೆ ಯುವಜನರಿಗೆ ಅರಿವು ಮೂಡುತ್ತದೆ ಎಂದರು. 

ಸಾಹಿತಿ ಇರಾ ನೇಮು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಕವಿ ಶೇಖರ ಭಂಡಾರಿ, ಪ್ರಗತಿಪರ ರೈತ ವಿಶ್ವನಾಥ  ರೈ, ಗಿರೀಶ್‌ ಶೆಟ್ಟಿ,  ಶೋಭಾರಾಣಿ ಉಪಸ್ಥಿತರಿದ್ದರು.ವಿವಿಧ ಕ್ಷೇತ್ರಗಳ ಸಾಧಕರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.ಸುಬ್ರಾಯ ನಾಯಡ್‌ ಅವರು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next