Advertisement
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಕೊಡಿಹಬ್ಬ ಉಡುಪಿ ಜಿಲ್ಲೆಯ ಪ್ರಧಾನ ಉತ್ಸವಗಳಲ್ಲೊಂದಾಗಿದೆ. ಶೈವಾಗಮ ಪದ್ಧತಿಯಂತೆ ನಿತ್ಯ ಪೂಜೆ ಹಾಗೂ ವಿಶೇಷ ಕಟ್ಲೆ ವಿನಿಯೋಗಗಳು ನಡೆಯುತ್ತವೆ. ಧನುರ್ಮಾಸದ ಈ ಅವಧಿಯಲ್ಲಿ ಸೂರ್ಯಾಸ್ತಮಾನದ ಮೊದಲು ಇಲ್ಲಿ ಪೂಜೆ ನಡೆಯುತ್ತದೆ.ಧನುರ್ಮಾಸ ಪೂಜೆಯನ್ನು ಪಶ್ಚಿಮ ಜಾಗರಣೆ ಪೂಜೆ ಎಂದೂ ಕರೆಯಲಾಗುತ್ತದೆ. ಎಲ್ಲ ಪೂಜಾಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನೆರವೇರುತ್ತದೆ.
ಧ್ವಜಪುರವೆಂದು ಖ್ಯಾತಿ ಹೊಂದಿದ ಈ ದೇಗುಲವು 1200 ವರ್ಷಗಳ ಇತಿಹಾಸ ಹೊಂದಿದೆ.ದೇಗುಲದ ಪರಂಪರೆ, ಇತಿಹಾಸವನ್ನು ಅವಲೋಕಿಸಿದರೆ ಸ್ಥಳ ಪುರಾಣವು ವಿಶೇಷತೆ ಪಡೆದಿದೆ. ಹೊಯ್ಸಳ, ಕೆಳದಿ, ಆಳುಪ ಹಾಗೂ ಸೂರಾಲಿನ ತೋಳಾರ ಅರಸರು ಈ ದೇಗುಲದಲ್ಲಿ ಆಡಳಿತ ನಡೆಸಿದ ಬಗ್ಗೆ ಅನೇಕ ಲಿಖೀತ ಕುರುಹುಗಳಿವೆ. ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರಾತಃಪೂಜೆ, ಉದಯಬಲಿ, ಮಧ್ಯಾಹ್ನ ಮಹಾಪೂಜೆ, ಸಾಯಂಪೂಜೆ ಹಾಗೂ ರಾತ್ರಿ 8 ಗಂಟೆಗೆ ಮಹಾಪೂಜೆ ಸಾಂಗವಾಗಿ ನಡೆಯುತ್ತದೆ.
-ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು,
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು.