Advertisement

ಕೋಟಿಕುಳಂ ರೈಲ್ವೇ ಮೇಲ್ಸೇತುವೆ ಕಾರ್ಯ ಸ್ಥಗಿತ

12:00 AM Feb 21, 2020 | Team Udayavani |

ಕಾಸರಗೋಡು: ಕೋಟಿಕುಳಂ ರೈಲ್ವೇ ಮೇಲ್ಸೇತುವೆಯ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳಲು ಕಾರಣ ನಿರ್ಮಾಣದ ಶೇ. 50 ವೆಚ್ಚವನ್ನು ರಾಜ್ಯ ಸರಕಾರವು ನೀಡದಿರುವುದೇ ಕಾರಣವೆಂದು ಬಿ.ಜೆ.ಪಿ.ಜಿಲ್ಲಾಧ್ಯಕ್ಷ,ನ್ಯಾಯವಾದಿ ಕೆ. ಶ್ರೀಕಾಂತ್‌ ಆರೋಪಿಸಿದ್ದಾರೆ.

Advertisement

2005- 2006ರ ಆರ್ಥಿಕ ವರ್ಷದಲ್ಲಿ ಪ್ರಾರಂಭಗೊಳ್ಳಬೇಕಾದ ನಿರ್ಮಾಣ ಕಾರ್ಯ ಇದುವರೆಗೂ ಮುಂದೂಡಲು ರಾಜ್ಯ ಸರಕಾರದ ಅನಾಸ್ಥೆಯೇ ಪ್ರಮುಖ ಕಾರಣವೆಂದು ಶ್ರೀಕಾಂತ್‌ ತಿಳಿಸಿದರು. ಮೇಲ್ಸೇತುವೆಯ ನಿರ್ಮಾಣ ಕಾರ್ಯಕ್ಕೆ ತಗಲುವ ವೆಚ್ಚದಲ್ಲಿ ಶೇ. 50‌ಕ್ಕಿಂತ ಹೆಚ್ಚು ಕೇಂದ್ರ ರೈಲ್ವೇ ಇಲಾಖೆ ಭರಿಸುತ್ತದೆ. ಬಾಕಿ ಬರುವಂತಹ ವೆಚ್ಚವನ್ನು ರಾಜ್ಯ ಸರಕಾರ ಭರಿಸಬೇಕಾದದ್ದು. ಈ ಮೊತ್ತವನ್ನು ರೈಲ್ವೇಗೆ ರಾಜ್ಯ ಸರಕಾರವು ಇದುವರೆಗೂ ಹಸ್ತಾಂತರಿಸಲಿಲ್ಲ. 2005-2006ರ ಆರ್ಥಿಕ ವರ್ಷದಿಂದಲೇ ಕೋಟಿಕುಳಂ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕಾಗಿ ರೈಲ್ವೇ ಇಲಾಖೆ ಸಜ್ಜಾಗಿತ್ತು. 2010-2011ರ ಆರ್ಥಿಕ ವರ್ಷದಿಂದ ರೈಲ್ವೇ 5.47 ಕೋಟಿ ರೂಪಾಯಿ ನಿಗಾ ಇರಿಸಿತ್ತು. ಆದರೆ ರಾಜ್ಯ ಸರಕಾರವು ಇದಕ್ಕೆ ಪೂರಕವಾದ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ.

ನಿಜಸ್ಥಿತಿ ಇದಾದುದರಿಂದ ಮೇಲ್ಸೇ ತುವೆಯ ನಿರ್ಮಾಣದ ಎಲ್ಲ ಮೊತ್ತವನ್ನು ಹಾಗೂ ಖರ್ಚನ್ನು ರಾಜ್ಯ ಸರಕಾರವು ಭರಿಸಬೇಕು. ಅದಕ್ಕಾಗಿ 19 ಕೋಟಿ ರೂಪಾಯಿ ರಾಜ್ಯ ಸರಕಾರ ನಿಗಾ ಇರಿಸಲಾಗಿದೆ ಎಂದೂ ಇದು ರೈಲ್ವೇಯ ತಾಂತ್ರಿಕ ಕಾರಣಗಳಿಂದಾಗಿ ನಿರ್ಮಾಣ ಕಾರ್ಯಗಳನ್ನು ಪ್ರಾರಂಭಗೊಳಿಸಲು ಸಾಧ್ಯವಾಗಿಲ್ಲವೆಂದು ಉದುಮ ಶಾಸಕ ಕೆ. ಕುಂಞಿರಾಮನ್‌ ಅವರ ಆರೋಪ ಆಧಾರ ರಹಿತವಾಗಿದೆ ಎಂದು ಶ್ರೀಕಾಂತ್‌ ವ್ಯಕ್ತಗೊಳಿಸಿದರು.

ಅಪ್ರೋಚ್‌ ರೋಡ್‌ ಕಾಮ ಗಾರಿ ನಿರ್ಮಿಸಬೇಕಾದದ್ದು ರಾಜ್ಯ ಸರಕಾ ರದ ಹೊಣೆಗಾರಿಕೆಯಾಗಿದ್ದು ಆ ಕೆಲಸ ಕಾರ್ಯಗಳನ್ನು ಇನ್ನೂ ಪ್ರಾರಂಭಗೊಳಿ ಸಲಿಲ್ಲ. ರಾಜ್ಯ ಸರಕಾರದ ಅಡಚಣೆಗಳನ್ನು ಮರೆಯಾಗಿರಿಸಿಕೊಂಡು ಉದುಮ ಶಾಸಕರು ಅಪಪ್ರಚಾರ ನಡೆಸುತಿದ್ದಾರೆ. ರೈಲ್ವೇ ಮೇಲ್ಸೇತುವೆಯ ಕೆಲಸ ಕಾರ್ಯಗಳಿಗೆ ಅಡಚಣೆಗಳನ್ನು ಉಂಟುಮಾಡಿದ್ದಲ್ಲಿ ರಾಜ್ಯ ಸರಕಾರಕ್ಕೆ ವಿರುದ್ಧವಾಗಿ ಬೃಹತ್‌ ಪ್ರತಿಭಟನೆಗಳಿಗೆ ನೇತೃತ್ವ ನೀಡುವೆವು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

2018-2019
ವರ್ಷದಲ್ಲಿ
2018-2019 ವರ್ಷದಲ್ಲಿ 16.70 ಕೋಟಿ ರೂಪಾಯಿ ನಿರ್ಮಾಣ ವೆಚ್ಚಕ್ಕಾಗಿ ನಿಗದಿಪಡಿಸಿತ್ತು. ಇದಕ್ಕೆ ದೇಶೀಯ ರೈಲ್ವೇ ಸುರಕ್ಷಾ ನಿಧಿಯಿಂದ 5.31 ಕೋಟಿ ರೂಪಾಯಿಯನ್ನು ಇರಿಸಲಾಗಿತ್ತು. ನಿರ್ಮಾಣ ಮೊತ್ತದ ರಾಜ್ಯ ಸರಕಾರದ ಪಾಲು 5.47 ಕೋಟಿ ರೊ. ರೈಲ್ವೇಗೆ ಹಸ್ತಾಂತರಿಸಬೇಕಾಗಿತ್ತು. ಆದರೆ ಇದಕ್ಕಾಗಿ ಎಡರಂಗ ಸರಕಾರ ತಯಾರಾಗಲಿಲ್ಲ. ಯೋಜನೆಯು ಜಾರಿಗೊಳಿಸಲು 2005-2006ರಿಂದ 2018-2019ರ ವರೆಗೆ ನಿರ್ಮಾಣ ಮೊತ್ತವನ್ನು ಇರಿಸಲಾಗಿದ್ದು ರಾಜ್ಯ ಸರಕಾರದ 50 ಶೇಕಡಾ ಪಾಲು ನೀಡದುದರಿಂದ ನಿರ್ಮಾಣ ಕಾರ್ಯಗಳು ನಡೆಯಲಿಲ್ಲ. ಇನ್ನು ನಿರ್ಮಾಣ ನಡೆಯಲು ಎಸ್ಟಿಮೇಟ್‌ ನವೀಕರಿಸಬೇಕಾಗಿದೆ. ರಾಜ್ಯ ಸರಕಾರದ ಪಾಲನ್ನು ರೈಲ್ವೇಗೆ ನೀಡಿದರೆ ನಿರ್ಮಾಣ ಕಾರ್ಯ ಕೈಗೊಳ್ಳ‌ಲು ರೈಲ್ವೇ ಸಿದ್ಧವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next