Advertisement

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ್ಯರ ಹೆಸರಿಡಲು ಸಿಎಂ ಗೆ ಉಡುಪಿ-ದ.ಕ ಶಾಸಕರ ಮನವಿ

07:30 PM Dec 10, 2020 | sudhir |

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇತಿಹಾಸದ ವೀರ ಪುರುಷರಾದ ಕೋಟಿ-ಚೆನ್ನಯ್ಯರ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ, ವಿಧಾನಪರಿಷತ್ತಿನ ಸಭಾ ನಾಯಕರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರನ್ನು ಅವಿಭಜಿತ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಶಾಸಕರ ನಿಯೋಗ ಭೇಟಿ ಮಾಡಿ ಮನವಿ ಮಾಡಿತು.

Advertisement

ನಿಯೋಗದಲ್ಲಿ ವಿಧಾನ ಸಭೆಯ ಮುಖ್ಯ ಸಚೇತಕರಾದ ಶ್ರೀ ಸುನೀಲ್ ಕುಮಾರ್ ಕಾರ್ಕಳ, ಶಾಸಕರುಗಳಾದ ಶ್ರೀ ರಾಜೇಶ್ ನಾಯ್ಕ್ ಬಂಟ್ವಾಳ, ಶ್ರೀ ರಘುಪತಿ ಭಟ್ ಉಡುಪಿ, ಶ್ರೀ ಉಮಾನಾಥ್ ಕೋಟ್ಯಾನ್ ಮೂಡುಬಿದಿರೆ, ಶ್ರಿ ಸಂಜೀವ ಮಠಂದೂರ್ ಪುತ್ತೂರು, ಶ್ರೀ ಭರತ್ ಶೆಟ್ಟಿ ಮಂಗಳೂರು ಉತ್ತರ, ಶ್ರೀ ವೇದವ್ಯಾಸ ಕಾಮತ್ ಮಂಗಳೂರು ದಕ್ಷಿಣ, ಶ್ರೀ ಹರೀಶ್ ಪೂಂಜಾ ಬೆಳ್ತಂಗಡಿ, ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಿಯೋಗದಿಂದ ಮುಖ್ಯಮಂತ್ರಿ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next