ಪಿರಿಯಾಪಟ್ಟಣ: ಪಟ್ಟಣದ ಶ್ರೀ ಕೋಟೆ ಹೆಬ್ಬಾಗಿಲು ಕೋಡಿ ಮಾರಮ್ಮ ದೇವಿಯ ವಾರ್ಷಿಕ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಮುಂಜಾನೆಯಿಂದಲೆ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು, ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಹೂ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಮುಂಜಾನೆಯಿಂದ್ದಲೆ ದೇವಿಯ ವಿಗ್ರಹ ಸೇರಿದ್ದಂತೆ ಇತರೆ ಪೂಜಾ ಸಾಮಾಗ್ರಿಗಳನ್ನು ಅಲಂಕರಿಸಿ ಹೊಮ ಹವನ ಪ್ರಾಂರಭಿಸಿದರು.
ಪಟ್ಟಣದ ಒಳಕೋಟೆ, ಉಪ್ಪಾರಬೀದಿ, ದೇವೇಗೌಡನ ಕೊಪ್ಪಲು, ಎಸ್.ಪಿ.ಆರ್.ಕಾಲೋನಿ, ಹೌಸಿಂಗ್ ಕಾಲೋನಿ, ಗಾಂಧಿನಗರ ಸೇರಿದಂತೆ ಇತರೆ ಬಡಾವಣೆಗಳ ನಿವಾಸಿಗಳು ಬೆಳಿಗ್ಗೆಯಿಂದಲೆ ದೇವಾಲಯಕ್ಕೆ ಆಗಮಿಸಿ ಸಾಲುಗಟ್ಟಿ ನಿಂತ್ತು ಮಾರಿಯಮ್ಮನಿಗೆ ದೇವಿಯ ದರ್ಶನ ಪಡೆದರು ನಂತರ ದೇವಿಗೆ ತಂಬ್ಬಿಟ್ಟಿನ ಸೇವೆ,ಎಳನೀರಿನ ಸೇವೆ, ಸೇರಿದ್ದಂತೆ ವಿವಿಧ ರೀತಿಯ ತಂಪಿನ ಸೇವೆಗಳನ್ನು ಭಕ್ತಿಯಿಂದ ಸಮರ್ಪಿಸಿ ಜೊತೆಗೆ ತಾವು ಮಾಡಿಕೊಂಡಿದ್ದ ಹರಿಕೆಗಳನ್ನು ತಿರಿಸಿ ಭಕ್ತಿ ಮೆರೆದರು.
ಐತಿಹಾಸಿಕ ಹಿನ್ನೆಲೆ:
ಕೋಟೆ ಹೆಬ್ಬಾಗಿಲು ಕೋಡಿ ಮಾರಮ್ಮ ದೇವಿಯು ಪ್ರಸಿದ್ದ ಶ್ರೀ ಮಸಣಿಕಮ್ಮ ದೇವಿಯಂತೆ ರಾಜರ ಆಳ್ವಿಕೆಯ ಕಾಲದಲ್ಲಿ ಪಿರಿಯಾಪಟ್ಟಣ ನಾಡಿನ ರಾಜ ಪೆರಿಯಾರಾಜನ ಆಡಳಿತದಲ್ಲಿ ಪೂರ್ವ ಮುಖವಾಗಿರುವ ಕೋಟೆಯ ಹೆಬ್ಬಾಗಿಲಿನಲ್ಲಿ ನೆಲೆಗೊಂಡು ನಾಡಿನ ರಕ್ಷಣೆಗಾಗಿ ಕಾವಲು ಕಾಯುತ್ತಿದ್ದಳು ಎಂದು ಇತಿಹಾಸವಿದೆ. ಈ ದೇವಿಯ ಜೊತೆಯಲ್ಲಿ ಆಂಜನೇಯ ಹಾಗೂ ತಲಪೊಟ್ಟರಾಯ ಎಂಬ ಶಕ್ತಿ ದೇವರುಗಳು ಸಹ ನೆಲೆಸಿದ್ದು ಇವರುಗಳಿಗೂ ಕೂಡ ಪ್ರತಿನಿತ್ಯ ಪೂಜೆ ಸಲ್ಲುತ್ತಿದೆ. ಜನರಿಗೆ ಸೀತಾಳೆಯಮ್ಮ, ದಡಾರ, ಈಗೆ ವಿವಿಧ ರೀತಿಯ ಚರ್ಮ ಖಾಯಿಲೆಗಳು ಬಂದ್ದ ಸಂದರ್ಭ ಈ ದೇವಿಗೆ ಹರಿಕೆ ಹೊತ್ತುಕೊಂಡರೆ ಗುಣಮುಖರಾಗುತ್ತಾರೆ ಎಂದು ಹಿರಿಯರು ಈ ದೇವಿಯ ಪವಾಡವನ್ನು ತಿಳಿಸುತ್ತಾರೆ.