Advertisement

‘ಗಿಳಿವಿಂಡು’ಗೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ

12:12 AM Jun 25, 2019 | Sriram |

ಮಂಜೇಶ್ವರ: ಕರ್ನಾಟಕ ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಜೇಶ್ವರ ಗೋವಿಂದ ಪೈ ಸಮುಚ್ಚಯ ಗಿಳಿವಿಂಡುವಿಗೆ ಭೇಟಿ ನೀಡಿದರು.

Advertisement

ಗಿಳಿವಿಂಡು ಪರಿಸರದಲ್ಲಿರುವ ಭವನಿಕಾ ರಂಗಮಂದಿರ, ಕವಿ ನಿವಾಸ, ಗ್ರಂಥಾಲಯ, ಅತಿಥಿ ಗೃಹ, ಯಕ್ಷಗಾನ ಕಲಾಕೇಂದ್ರ ಸಹಿತ ಪಾರ್ತಿಸುಬ್ಬ ವೇದಿಕೆಯನ್ನು ವೀಕ್ಷಿಸಿದರು. ಎರಡು ವರ್ಷಗಳ ಹಿಂದೆ ನವನಿರ್ಮಾಣಗೊಂಡ ಗಿಳಿವಿಂಡು ಸಮುಚ್ಚಯದ ಕವಿ ನಿವಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಸರಕಾರದ ಸಹಯೋಗದೊಂದಿಗೆ ಪುನರ್‌ ನಿರ್ಮಾಣ ಕಂಡ ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಅವಲೋಕಿಸಿದರು. ಕೇರಳ ಮತ್ತು ಕರ್ನಾಟಕ ಸರಕಾರಗಳ ಅನುದಾನ ಮತ್ತು ಎಂ.ಆರ್‌.ಪಿ.ಎಲ್. ಸಹಕಾರದೊಂದಿಗೆ ನಿರ್ಮಾಣಗೊಂಡು ನಾಡಿಗೆ ಸಮರ್ಪಿತವಾಗಬೇಕಿದ್ದ ಗಿಳಿವಿಂಡು ಸಮುಚ್ಛಯದ ಭಾಗವಾಗಿರುವ ಭವನಿಕಾ ರಂಗಮಂದಿರ‌ ಅಪೂರ್ಣಗೊಂಡ ಬಗ್ಗೆ ಖೇದ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸಭಾಪತಿ ಎಸ್‌.ಎಲ್. ಧರ್ಮೇಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಜತೆಗಿದ್ದರು. ಗಿಳಿವಿಂಡು ಆಡಳಿತಾಧಿಕಾರಿ ಡಾ| ಕಮಲಾಕ್ಷ ಅವರು ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಗಿಳಿವಿಂಡು ಸಮುಚ್ಛಯದಲ್ಲಿ ನಿರಂತರ ಸಾಹಿತ್ತಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ತನ್ನ ವೈಯಕ್ತಿಕ ಅನುದಾನದ ಮೂಲಕ ತಲಾ 10 ಲಕ್ಷ ರೂ. ನೀಡುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ಈ ಸಂದರ್ಭ ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್‌, ಸ್ಥಳೀಯ ನೇತಾರರಾದ ಹರಿಶ್ಚಂದ್ರ ಮಂಜೇಶ್ವರ, ಆದರ್ಶ ಬಿ.ಎಂ., ಗೋಪಾಲ ಶೆಟ್ಟಿ ಅರಿಬೈಲು, ಮಂಗಳೂರು ಮಾಜಿ ಕಾರ್ಪೊರೇಟರ್‌ ಶ್ರೀನಿವಾಸ ಶೆಟ್ಟಿ, ಯಾದವ ಬಡಾಜೆ, ಸತೀಶ್ಚಂದ್ರ ಭಂಡಾರಿ ಕೋಳಾರು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್‌.ಸುಬ್ಬಯ್ಯಕಟ್ಟೆ, ಉಪಾಧ್ಯಕ್ಷ ಪ್ರೊ| ಎ. ಶ್ರೀನಾಥ್‌, ಗಿಳಿವಿಂಡು ಸ್ಮಾರಕ ಟ್ರಸ್ಟ್‌ನ ಕೆ.ಆರ್‌. ಜಯಾನಂದ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next