Advertisement
ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಭವಿಷ್ಯದಲ್ಲಿ ಕೆನರಾ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆಂಬ ವಿಚಾರ ಕೆಲ ತಿಂಗಳ ಹಿಂದೆ ಉಭಯ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಸುದ್ದಿಗಳು ಹರಡಿದ್ದವು. ಆದರೆ ಹುಟ್ಟಿದಷ್ಟೇ ವೇಗವಾಗಿ ಆ ಸುದ್ದಿ ಕರಗಿ ಹೋಗಿತ್ತು. ಆದರೆ ಈ ವಿಚಾರ ಈಗ ಉತ್ತರ ಕನ್ನಡದಲ್ಲಕ ಮತ್ತೆ ಹೊಸ ಚರ್ಚೆ ಹುಟ್ಟು ಹಾಕಿದೆ. ಸಂಸದ ಅನಂತಕುಮಾರ್ ಹೆಗಡೆ ರಾಜಕೀಯ ನಿವೃತ್ತಿಯ ರೀತಿ ಹೇಳಿಕೆ ನೀಡಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಆದರೆ ಸಚಿವ ಶಿವರಾಂ ಹೆಬ್ಬಾರ್ ಈ ಬಗ್ಗೆ ಎಲ್ಲಿಯೂ ಬಹಿರಂಗ ಹೇಳಿಕೆ ನೀಡಿಲ್ಲ. ಮೂಲಗಳ ಪ್ರಕಾರ ” ವರ್ಕೋಹಾಲಿಕ್ ” ಹೆಬ್ಬಾರ್ ಗೆ ಖುದ್ದು ಸಿಎಂ ಬೊಮ್ಮಾಯಿ ಅವರೇ ತಮ್ಮ ತವರು ಜಿಲ್ಲೆ ಹಾವೇರಿಯ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಯಲ್ಲಾಪುರ ಕ್ಷೇತ್ರ ಹಾವೇರಿ ಜಿಲ್ಲೆಗೆ ಹೊಂದಿಕೊಂಡೇ ಇರುವುದರಿಂದ ಹೆಚ್ಚಿನ ಸಮಸ್ಯೆಯಾಗುವುದಿಲ್ಲ ಎಂದೂ ಮನವೊಲಿಸಿದ್ದಾರೆ. ಹೀಗಾಗಿ ವಲಸಿಗ ಸಚಿವರ ಪೈಕಿ ಹೆಬ್ಬಾರ್ ಗೆ ಮಹತ್ವದ ಜವಾಬ್ದಾರಿ ಲಭಿಸಿದೆ.
Related Articles
Advertisement
ಇನ್ನು ಬೆಳಗಾವಿ ಜಿಲ್ಲೆಯಲ್ಲೂ ಉಸ್ತುವಾರಿ ಬಿಸಿ ಎದ್ದಿದೆ. ಜಿಲ್ಲಾ ಉಸ್ತುವಾರಿಗಾಗಿ ಪಟ್ಟು ಹಿಡಿದಿದ್ದ ಉಮೇಶ್ ಕತ್ತಿ ಇದೀಗ ಮೌನಕ್ಕೆ ಶರಣಾಗಿದ್ದಾರೆ.