ಕೊರಟಗೆರೆ: ಭಾರತ ದೇಶದ 130ಕೋಟಿ ಜನರ ಆರೋಗ್ಯ ರಕ್ಷಣೆ ಮಾಡಿದ್ದು ನರೇಂದ್ರ ಮೋದಿ. ಕಾಯಿಲೆ ಬಂದರೇ ನಮಗೇ ವಿದೇಶದಿಂದ ಔಷಧಿ ಬರಬೇಕಿತ್ತು. ಆದರೇ ಮೋದಿ ಸರಕಾರ ವಿದೇಶಕ್ಕೆ ಕೊರೊನಾ ಔಷಧಿ ಕಳಿಸಿದರು. ಸಿದ್ದರಾಮಯ್ಯ ಕೊರೊನಾ ಔಷಧಿಯ ಬಗ್ಗೆ ಲೇವಡಿ ಮಾಡಿದರು ಆಮೇಲೆ ಅವರೇ ಮೊದಲು ಔಷಧಿ ಪಡೆದುಕೊಂಡರು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಾಲ್ಮೀಕಿ ಸಮುದಾಯದ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಾಹುಲ್‌ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡ್ತಾರೇ. ಹಾಗಾದ್ರೇ ಕಾಶ್ಮೀರವನ್ನು ಭಾಗ ಮಾಡಿದೋರು ಯಾರು. ಕಾಶ್ಮಿರದಲ್ಲಿ ಭಯೋತ್ಪಾದಕರ ಅಟ್ಟಹಾಸ ಇತ್ತು. ವಿಶ್ವನಾಯಕ ಮೋದಿ ಬಂದ ನಂತರ ಸೈನ್ಯಕ್ಕೆ ಅಧಿಕಾರ ನೀಡಿ ಈಗ ಆಕಾಶದೆತ್ತರಕ್ಕೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಜಗತ್ತೇ ಮೋದಿಗೆ ವಿಶ್ವ ನಾಯಕನ ಪಟ್ಟ ನೀಡಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗೆ ವಾರಂಟಿನೇ ಇಲ್ಲ. ಕಾಂಗ್ರೆಸ್ ಪಕ್ಷ ಜನರಿಗೆ ಸುಳ್ಳು ಭರವಸೆ ನೀಡೋದಕ್ಕೆ ಮಾತ್ರ ಫೇಮಸ್ಸು. ಕೊರಟಗೆರೆ ಜನತೆ ಕಾಂಗ್ರೆಸ್ ನಾಯಕರ ಮಾತನ್ನು ನಂಬದೇ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು ಎಂದು ಹೇಳಿದರು.
ರಾಜ್ಯ ಎಸ್ಟಿಮೋರ್ಚ ಪ್ರಧಾನ ಕಾರ್ಯದರ್ಶಿ ನರಸಿಂಹನಾಯ್ಕ ಮಾತನಾಡಿ ವಾಲ್ಮೀಕಿ ಸಮುದಾಯಕ್ಕೆ ಮೋದಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ವಿಶೇಷ ಪ್ರಾಮುಖ್ಯತೆ ನೀಡಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಸ್ಸಿ ಎಸ್ಟಿಗೆ ನ್ಯಾಯ ನೀಡಲಿಲ್ಲ ಈಗ ಆರೋಪ ಮಾಡ್ತಾರೇ ಅಷ್ಠೆ. ಅನಿಲ್‌ಕುಮಾರ್ ಆಕಾಂಕ್ಷಿ ಅಲ್ಲ ಅವರೇ ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಸರಕಾರಿ ಸೇವೆಯ ನಂತರ ಸಮಾಜ ಸೇವೆಗೆ ಕೊರಟಗೆರೆ ಕ್ಷೇತ್ರಕ್ಕೆ ಬಂದಿದ್ದಾರೆ. ಸರಕಾರಿ ಅಧಿಕಾರಿ ಆಗಿ ನಾವು ನೋಡಿದ್ದೆವೆ. ಜನ ನಾಯಕನಾಗಿ 2023ಕ್ಕೆ ನಾವೆಲ್ಲರೂ ನೋಡಬೇಕಿದೆ ಎಂದು ತಿಳಿಸಿದರು.
Related Articles
ಸಮಾವೇಶದಲ್ಲಿ ಮಧುಗಿರಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ, ಜಿಲ್ಲಾ ಎಸ್ಟಿಮೋರ್ಚಾ ಅಧ್ಯಕ್ಷ ಬ್ಯಾಡನೂರು ಶಿವು, ಕೊರಟಗೆರೆ ಮಂಡಲ ಅಧ್ಯಕ್ಷ ಪವನಕುಮಾರ್, ಎಸ್ಟಿ ಮಂಡಲಮೋರ್ಚ ಅಧ್ಯಕ್ಷ ಗೋಪಾಲಕೃಷ್ಣ, ಮುಖಂಡರಾದ ಗುಡ್ಡದ ರಂಗಪ್ಪ, ಓನಮಃ ನಾರಾಯಣ್, ಸುಶೀಲಮ್ಮ, ಶಿವರುದ್ರಪ್ಪ, ಗುರುಧತ್, ರಘು, ಹನುಮಂತರಾಜು, ದಾಡಿವೆಂಕಟೇಶ್, ಅಶೋಕ್, ಕೆಂಪರಾಜು, ರಂಗಣ್ಣ, ತಿಮ್ಮರಾಜು, ನಾಗರಾಜು ಸೇರಿದಂತೆ ಇತರರು ಇದ್ದರು.
ವಾಲ್ಮೀಕಿ ಜಯಂತಿ, ಪರಿಶಿಷ್ಟ ಪಂಗಡಕ್ಕೆ 3ರಿಂದ 7ಕ್ಕೆ ಮೀಸಲಾತಿ ಹೆಚ್ಚಳ, ಪ್ರತ್ಯೇಕ ಸಚಿವಾಲಯ ಮತ್ತು ಮಂತ್ರಿ ಮಂಡಲ ರಚನೆ ಮಾಡಿ ನಮ್ಮ ಬಿಜೆಪಿ ಸರಕಾರ. ವಿಶ್ವನಾಯಕ ನರೇಂದ್ರಮೋದಿ ನೇತೃತ್ವದ ಆಡಳಿತವೇ ನಮಗೆ ಶ್ರೀರಕ್ಷೆ. ವಾಲ್ಮೀಕಿ ಸಮಾಜದ ಜನತೆಯ ಜೊತೆಯಲ್ಲಿ ನಾನು ಸದಾ ಇರ್ತೇನೆ. ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ.
-ಅನಿಲ್‌ಕುಮಾರ್.ಬಿ.ಹೆಚ್. ಬಿಜೆಪಿ ಮುಖಂಡ. ಕೊರಟಗೆರೆ