ಉಡುಪಿ: ಕಾನೂನು ಸುವ್ಯವಸ್ಥೆ ಪಾಲಿಸುವ ಹೆಸರಿನಲ್ಲಿ ರಾಜ್ಯಸರಕಾರ 30 ವರ್ಷದ ಹಿಂದಿನ ಪ್ರಕರಣ ತೆರೆದಿರುವುದು ಸರಕಾರದ ಚಟುವಟಿಕೆ ಎಲ್ಲಿಗೆ ತಲುಪಿದೆ ಎಂಬುವುದು ತಿಳಿಯುತ್ತದೆ ಎಂದು ಉಡುಪಿ ಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹಳೆಯ ಪ್ರಕರಣಗಳನ್ನು ಹುಡುಕಿ ಜೈಲಿಗೆ ಹಾಕುವ ಕೆಲಸ ನಿಮಗೆ ಹೆಮ್ಮೆ ತರುತ್ತದೆಯೇ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್‌ನ ದುರ್ನಡತೆ ಅತ್ಯಂತ ಕ್ರೂರ ಮತ್ತು ಖಂಡನೀಯ ಎಂದರು.
ಅಯೋಧ್ಯೆ ರಾಮಮಂದಿರ ಇಡೀ ದೇಶ ಹೆಮ್ಮೆ ಪಡುವ ಕೆಲಸ ಆಗುತ್ತಿದೆ. ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರವು ದೇಶಕ್ಕೆ ಮತ್ತು ಪ್ರಪಂಚಕ್ಕೆ ಹೆಮ್ಮೆಯ ವಿಚಾರವಾಗಿದೆ. ಇದನ್ನು ಗೌರವಿಸಬೇಕಾದದ್ದು ಪಕ್ಷ ಮತ್ತು ಸರಕಾರದ ಜವಾಬ್ದಾರಿಯಾಗಿದೆ ಎಂದರು.
ಯತ್ನಾಳ್ ಆರೋಪ ಅವರ ಎಲ್ಲ ಹೇಳಿಕೆಗಳು ಚರ್ಚೆಯಲ್ಲಿದೆ. ಕೇಂದ್ರ ನಾಯಕರು ಕರೆದು ಅವರಿಗೆ ಬುದ್ಧಿ, ತಿಳಿವಳಿಕೆ ಹೇಳುತ್ತಾರೆ ಎಂದರು.
ಎಫ್ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ಮರಗಳ್ಳತನ ಪ್ರಕರಣ ದಲ್ಲಿ ವಿಕ್ರಂ ಸಿಂಹ ಅವರ ಬಂಧನವಾಗಿದೆ. ಬಿಜೆಪಿ ಸಂಸದನ ಸಹೋದರ ಎಂಬ ಕಾರಣಕ್ಕೆ ಬಂಧಿಸಲಾಗಿದೆ. ಇಂತಹ ವಿಪರೀತಕ್ಕೆ ಸರಕಾರ ಹೋಗಬಾರದಿತ್ತು. ಕ್ಷುಲ್ಲಕ ಕಾರಣಕ್ಕೆ ಮುಖ್ಯಮಂತ್ರಿಯ ಮಗನನ್ನು ಗೆಲ್ಲಿಸುವ ಕಾರಣಕ್ಕೆ ಇಷ್ಟೆಲ್ಲ ಮಾಡಿದ್ದು ಸರಿಯಲ್ಲ ಎಂದರು.