Advertisement

ಕೋಟ: ಡಿ.30 ರಂದು ವಡ್ಡರ್ಸೆ ಪ್ರೌಢಶಾಲೆ ರಜತ ಮಹೋತ್ಸವ, ಅಕ್ಷರ ಅಂಬಾರಿ ಲೋಕಾರ್ಪಣೆ

03:39 PM Dec 29, 2022 | Team Udayavani |

ಕೋಟ: ವಡ್ಡರ್ಸೆ ಸರಕಾರಿ ಪ್ರೌಢಶಾಲೆಯ ಇಪ್ಪತೈದರ ಸಂಭ್ರಮ “ರಜತ ಪರ್ವ” ಕಾರ್ಯಕ್ರಮ ಡಿ.30ರಂದು ಜರಗಲಿದೆ.

Advertisement

ಈ ಪ್ರಯುಕ್ತ ರಜತ ಮಹೋತ್ಸವ ಸಮಿತಿಯ ನೇತೃತ್ವದಲ್ಲಿ ಹಳೆ ವಿದ್ಯಾರ್ಥಿ ಸಂಘಟನೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತವಾರಿ ಸಮಿತಿ, ಶಾಲಾ ಶಿಕ್ಷಕರು ಪೋಷಕರು ವಿದ್ಯಾಭಿಮಾನಿಗಳು, ದಾನಿಗಳ ಸಹಕಾರ ಹಾಗೂ ನೆರವಿನೊಂದಿಗೆ ವಿವಿಧ ಅದ್ದೂರಿಯ ಕಾರ್ಯಕ್ರಮ ಜರಗಲಿದೆ.

ಈ‌ಪ್ರ ಯುಕ್ತ ಬೆಳಗ್ಗೆ 8.30ಕ್ಕೆ ವಿಶೇಷ ಪುರ ಮೆರವಣಿಗೆಯೊಂದಿಗೆ ರಜತ ಮಹೋತ್ಸವ ಅನಾವರಣಗೊಳ್ಳಲಿದೆ. 9 ಗಂಟೆಗೆ ಧ್ವಜಾರೋಹಣ, 9:30ಕ್ಕೆ ಬಹುಮಾನ ವಿತರಣೆ, ನಡೆಯಲಿದೆ. ಸಂಜೆ 5 ರಿಂದ ಸ್ಥಳೀಯ ಅಂಗನವಾಡಿ ಮಕ್ಕಳಿಂದ ನೃತ್ಯ ಸಿಂಚನ ಕಾರ್ಯಕ್ರಮ, ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ಡರ್ಸೆ ಹಾಗೂ ವಿವೇಕಾನಂದ  ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಧುವನ ವಿದ್ಯಾರ್ಥಿಗಳಿಂದ ನಾಟ್ಯ ಸಂಭ್ರಮ, ಸಂಜೆ 6:30 ರಿಂದ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ದತ್ತಿನಿಧಿ ವಿತರಣೆ, ಗುರುವಂದನೆ, ಕಾರ್ಯಕ್ರಮವು ಜರುಗಲಿದೆ. ಈ ಕಾರ್ಯಕ್ರಮದಲ್ಲಿ, ಸಚಿವರು, ಶಾಸಕರು ಜನಪ್ರತಿನಿಧಿಗಳು, ದಾನಿಗಳು, ಭಾಗವಹಿಸಲಿದ್ದಾರೆ.

ಅಕ್ಷರ ಅಂಬಾರಿ ಲೋಕಾರ್ಪಣೆ:

ಶ್ರೀ ಶಂಕರನಾರಾಯಣ ಕನ್ಸ್ಟ್ರಕ್ಷನ್ (ಪ್ರೈ) ಲಿಮಿಟೆಡ್ ಬೆಂಗಳೂರು ಅವರು ಶಾಲೆಗೆ ನೀಡಿದ ವಾಹನ ಅಕ್ಷರ ಅಂಬಾರಿ ಉದ್ಘಾಟನೆ ಹಾಗೂ ಶಾಲೆಗೆ ನೀಡಲಾದ ಸಿ.ಸಿ. ಕ್ಯಾಮರಾದ ಉದ್ಘಾಟನೆಯು ನಡೆಯಲಿದೆ. ರಾತ್ರಿ 8:30ಯಿಂದ ಪೌಢಶಾಲಾ ಮಕ್ಕಳಿಂದ ಸಾಂಸ್ಕ್ರತಿ ಕಾರ್ಯಕ್ರಮ ಡಾನ್ಸ್ ಮೆರಗು, ನಾಟಕ, ಯಕ್ಷಗಾನ ಹಾಗೂ ಹಳೆ ವಿದ್ಯಾರ್ಥಿಗಳಿಂದ ಕುಂದಾಪ್ರ ಕನ್ನಡದಲ್ಲಿ ನಗುವಿನ ಚಿತ್ತಾರ ನಾಟಕವು ಪ್ರಸ್ತುತಿಯಾಗಲಿದೆ. ರಜತಮಹೋತ್ಸವ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಕೊತ್ತಾಡಿ, ಗೌರವಾಧ್ಯಕ್ಷ ಭೋಜ ಹೆಗ್ಡೆ, ಸಂಸ್ಥೆಯ ಮುಖ್ಯ ಶಿಕ್ಷಕಿ ಗಾಯತ್ರಿದೇವಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೆಟ್ಟಿ ಯಾಳಹಕ್ಲು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.