Advertisement
ಕುಂದಾಪುರದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಬಸ್ಸು ಏಕಾಏಕಿ ಕೋಟ ಬಸ್ಸು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದು, ಈ ಸಂದರ್ಭ ಹಿಂಬದಿಯಿಂದ ಬರುತ್ತಿದ್ದ ಬೆ„ಕ್ ಬಸ್ಸಿಗೆ ಢಿಕ್ಕಿ ಹೊಡೆದಿದ್ದು, ಸವಾರ ಗಣೇಶ್ ಮತ್ತು ಸಹ ಸವಾರ ಸುಮಂತ್ ಗಂಭೀರ ಗಾಯಗೊಂಡಿದ್ದರು. ತತ್‌ಕ್ಷಣ ಅವರನ್ನು ಕೋಟ ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಸ್ಸುಗಳು ಸರ್ವೀಸ್ ರಸ್ತೆಯನ್ನು ಕಡ್ಡಾಯವಾಗಿ ಪ್ರವೇಶಿಸಬೇಕು ಎನ್ನುವ ನಿಯಮವಿದ್ದರೂ ಬಹುತೇಕ ಲೀ ನಿಯಮ ಪಾಲನೆಯಾಗುತ್ತಿಲ್ಲ ಹಾಗೂ ಮುಖ್ಯ ರಸ್ತೆಯಲ್ಲೇ ಬಸ್ಸುಗಳನ್ನು ನಿಲುಗಡೆ ಮಾಡುವುದರಿಂದ ಹಿಂಬದಿಯಿಂದ ಬರುವ ವಾಹನ ಸವಾರರು ಬಸ್ಸಿನ ಚಲನ-ವಲನ ಸರಿಯಾಗಿ ಗಮನಿಸದೆ ಅಪಘಾತ ಉಂಟಾಗುತ್ತಿದೆ. ಸರ್ವೀಸ್ ರಸ್ತೆಯಲ್ಲಿ ಬೇಕಾಬಿಟ್ಟಿ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದಲೂ ಸಮಸ್ಯೆ ಇದ್ದು, ಈ ಬಗ್ಗೆ ಕ್ರಮಕೈಗೊಂಡು, ಬಸ್ಸುಗಳು ಸರ್ವೀಸ್ ರಸ್ತೆ ಪ್ರವೇಶಿಸುವುದು ಕಡ್ಡಾಯಗೊಳಿಸಬೇಕು, ಇಲ್ಲವಾದರೆ ಅಪಾಯವಿದೆ ಎಂದು ಉದಯವಾಣಿ ಈ ಹಿಂದೆ ಜನಪರ ಕಾಳಜಿಯ ಸುದ್ದಿ ಪ್ರಕಟಿಸಿತ್ತು. ಆದರೆ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳದಿರುವುದರಿಂದ ಮುಗ್ಧ ಜೀವಗಳು ಬಲಿಯಾಗುತ್ತಿದೆ. ಆರ್.ಟಿ.ಓ. ಇಲಾಖೆ ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕಿದೆ.
Related Articles
Advertisement