ತೆಕ್ಕಟ್ಟೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಜಸ್ತಾನ ಮೂಲದ ಸುಮಾರು 30 ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಊಟಕ್ಕೆ ಪರದಾಡುತ್ತಿರುವುದು ಬೀಟ್ ಪೋಲಿಸ್ ಆಗಿರುವ ಅಶೋಕ್ ಶೆಟ್ಟಿಯವರ ಗಮನಕ್ಕೆ ಬಂತು..ಕೂಡಲೇ ಅವರು ಹೋಗಿ ವಿಚಾರಿಸಿದಾಗ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು. ನಾವು ಪ್ರತೀ ದಿನ ಚಪಾತಿ ಬಿಟ್ಟರೆ ಬೇರೆ ಏನೂ ತಿನ್ನುವುದಿಲ್ಲ ಎಂದರು. ಹಾಗಾಗಿ ಕೂಡಲೇ ಅಶೋಕ್ ಶೆಟ್ಟಿ ಅವರು 25 kg ಗೋದಿ ಮತ್ತು 5 ಲೀಟರ್ ಎಣ್ಣೆಯನ್ನು ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
Advertisement