ಮಂಗಳೂರು: ಕರಾವಳಿ ಕಡಲು ಮೀನುಗಾರಿಕೆಯಲ್ಲಿ ಇನ್ನು ಮುಂದೆ ಸ್ವದೇಶಿ ನಿರ್ಮಿತ ಬೋಟ್, ಯಂತ್ರೋಪಕರಣ ಹಾಗೂ ಎಂಜಿನ್‌ಗಳನ್ನು ಬಳಸಿಕೊಳ್ಳಲು ಉದ್ದೇಶಿಸ ಲಾಗಿದ್ದು, ಇದಕ್ಕೆ ಮೀನುಗಾರರು ಸಿದ್ಧರಾಗುವಂತೆ ಮೀನುಗಾರಿಕೆ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ.
ಸ್ವದೇಶಿ ನಿರ್ಮಿತ ಮೀನುಗಾರಿಕಾ ಬೋಟ್‌ನ ಎಂಜಿನ್/ಉಪಕರಣಗಳ ಉತ್ಪಾದನೆ ಮಾಡುವ ಕೈಗಾರಿಕೆಗಳ ಪ್ರತಿನಿಧಿಗಳು, ತಂತ್ರಜ್ಞರು, ಕರಾ ವಳಿಯ ಮೀನುಗಾರ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಮೀನುಗಾರಿಕೆಗೆ ಬಳಸುವಶೇ. 90ರಷ್ಟು ಬೋಟ್, ಯಂತ್ರೋ ಪಕರಣ ಹಾಗೂ ಎಂಜಿನ್‌ಗಳನ್ನು ವಿದೇಶಿ ಹಾಗೂ ಹೆಚ್ಚಾಗಿ ಚೀನ ನಿರ್ಮಿತ ಉಪಕರಣಗಳನ್ನು ಬಳಸಲಾಗುತ್ತಿದೆ. ಇದು ಮೀನುಗಾರರಿಗೆ ದುಬಾರಿ ಒಂದೆಡೆಯಾದರೆ, ಬಿಡಿ ಭಾಗಗಳು ಲಭ್ಯವಿಲ್ಲದೆ ತೊಂದರೆಯಾಗುತ್ತಿದೆ.
ಈ ಅಂಶಗಳನ್ನು ಗಮನಿಸಿ ಸ್ವದೇಶಿ ನಿರ್ಮಿತ ಯಂತ್ರೋಪಕರಣ ಹಾಗೂ ಎಂಜಿನ್ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು. ಸಭೆಯ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ಸಚಿವ ಕೋಟ ಅವರು “ಕುಂದಾಪುರ, ಮಲ್ಪೆ, ಉತ್ತರ ಕನ್ನಡ, ಮಂಗಳೂರಿನ ಮೀನುಗಾರಿಕಾ ಮುಖಂಡರು, ದೇಶೀಯ 9 ಸ್ವದೇಶಿ ಕಂಪೆನಿಯ ಪ್ರಮುಖರು ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸ್ವದೇಶಿ ನಿರ್ಮಿತ ಯಂತ್ರೋಪಕರಣವನ್ನು ಬಳಸುವ ಬಗ್ಗೆ ಕಂಪೆನಿಯವರಿಗೆ ಸೂಚಿಸಲಾಗಿದೆ. ಗುಣಮಟ್ಟ ಹಾಗೂ ದರ ಸೂಕ್ತವೆನಿಸಿದರೆ ಇದಕ್ಕೆ ಒಪ್ಪಿಕೊಳ್ಳಲು ಮೀನುಗಾರರು ಸಿದ್ಧರಿರುವ ಬಗ್ಗೆ ತಿಳಿಸಿದ್ದಾರೆ. ಜತೆಗೆ ಮೀನುಗಾರಿಕೆ ನಡೆಸುವ ಬೋಟ್‌ಗಳಿಗೆ ಡೀಸೆಲ್ ಬಳಕೆಯ ಬದಲು ಗ್ಯಾಸ್ ಬಳಕೆಗೆ ಒತ್ತು ನೀಡಲು ಸೂಚಿಸಲಾಗಿದೆ’ ಎಂದರು.