Advertisement
24 ಗಂಟೆ ಸೇವೆಗೆ ಬೇಡಿಕೆಉಪವಿಭಾಗದಲ್ಲಿ ದಿನದ 24ಗಂಟೆ ಸಾರ್ವಜನಿಕರಿಗೆ ಸೇವೆ ನೀಡುವುದಾಗಿ ತಿಳಿಸಲಾಗಿದೆ ಜತೆಗೆ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಆದರೆ ರಾತ್ರಿಪಾಳಿಯಲ್ಲಿ ಸಿಬಂದಿಗಳ ಕೊರತೆ ಇರುವುದರಿಂದ ರಾತ್ರಿ 10ಗಂಟೆಯ ಅನಂತರ ಅವಘದ ನಡೆದಾಗ ಸಮರ್ಪಕ ಸೇವೆ ದೊರಕುತ್ತಿಲ್ಲ. ಆದ್ದರಿಂದ ಅಗತ್ಯ ಸಿಬಂದಿಗಳನ್ನು ನೇಮಕ ಮಾಡಿ ದಿನದ 24ಗಂಟೆ ಸೇವೆ ಸಿಗುವಂತೆ ಮಾಡಬೇಕು ಎಂದು ಗ್ರಾಹಕರ ಪರವಾಗಿ ಕೋಟ ಶ್ರೀಕಾಂತ್ ಶೆಣೈ ವಿನಂತಿಸಿದರು.
ದಿನದ 24ಗಂಟೆ ಬಿಲ್ ಪಾವತಿಗೆ ಅನುಕೂಲವಾಗುವಂತೆ ಯಂತ್ರಚಾಲಿತ ಎ.ಟಿ.ಪಿ. ಯಂತ್ರವನ್ನು ಕೋಟದಲ್ಲಿ ಅಳವಡಿಸಬೇಕು. ಇದರಿಂದ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಅನುಕೂಲವಾಗುತ್ತದೆ ಎಂದು ಗ್ರಾಹಕರು ಮನವಿ ಸಲ್ಲಿಸಿದರು. ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಅಧೀಕ್ಷಕರು ತಿಳಿಸಿದರು. ತಿಂಗಳಿಗೊಮ್ಮೆ ವಿದ್ಯುತ್ ಗುತ್ತಿಗೆದಾರರ ಸಭೆ ನಡೆಸಿ : ವಿದ್ಯುತ್ ಗುತ್ತಿಗೆದಾರರ ಸಮಸ್ಯೆ ಹಾಗೂ ಹೊಸ ಆದೇಶಗಳ ಕುರಿತು ವಿಚಾರ ವಿನಿಮಯ ನಡೆಸುವ ಸಲುವಾಗಿ ಪ್ರತಿ ತಿಂಗಳು ಬ್ರಹ್ಮಾವರ ವಿಭಾಗ ಕಚೇರಿಯಲ್ಲಿ ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಸಭೆ ನಡೆಸಬೇಕು ಎಂದು ವಿದ್ಯುತ್ ಗುತ್ತಿಗೆದಾರರು ಬೇಡಿಕೆ ಸಲ್ಲಿಸಿದರು. ಈ ಕುರಿತು ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
Related Articles
Advertisement
ಡಿಸೆಂಬರ್ ಅಂತ್ಯದೊಳಗೆ ದೀನ್‌ದಯಾಳ್ ಯೋಜನೆ: ಪಂಡಿತ್ ದೀನ್‌ದಯಾಳ್ ಉಪಾಧ್ಯಾ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದವರಿಗೆ ಇದುವರೆಗೆ ಸಂಪರ್ಕ ದೊರೆತಿಲ್ಲ ಎಂದು ವಡ್ಡರ್ಸೆ ಗ್ರಾ.ಪಂ. ಸದಸ್ಯ ಚಂದ್ರಶೇಖರ ಶೆಟ್ಟಿ ತಿಳಿಸಿದರು. ದೀನ್‌ದಯಾಳ್ ಯೋಜನೆಗೆ ತಾಂತ್ರಿಕ ಸಮಸ್ಯೆಯಿಂದಾಗಿ ತಂತಿ ಅಳವಡಿಕೆಗೆ ಅನುಮತಿ ದೊರೆತಿಲ್ಲ. ಡಿಸೆಂಬರ್ ಅಂತ್ಯದೊಳಗೆ ಯೋಜನೆಯ ಪ್ರಯೋಜನ ಫಲಾನುಭವಿಗಳಿಗೆ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೋಟ ಗ್ರಾ.ಪಂ. ಸದಸ್ಯರಾದ ಸಂತೋಷ ಪ್ರಭು, ಅಜಿತ್ ಕೋಟ, ಪಾಂಡು ಅವರು ಕೋಟ ವ್ಯಾಪ್ತಿಯಲ್ಲಿನ ವಿವಿಧ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಸೆಳೆದರು ಹಾಗೂ ಕಾವಡಿ ಪಡುಮಾನಂಬಳ್ಳಿಯಲ್ಲಿನ ವಿದ್ಯುತ್ ತಂತಿ ಸಮಸ್ಯೆ ಸಭೆಯಲ್ಲಿ ಪ್ರಸ್ತಾವವಾಯಿತು. ಬಿ.ಪಿ.ಎಲ್. ಕಾರ್ಡ್ ಇಲ್ಲದವರು ವಿದ್ಯುತ್ ಸಂಪರ್ಕ ಪಡೆಯಲು ಅನರ್ಹರಲ್ಲ. ಕಾರ್ಡ್‌ಗೆ ಅರ್ಜಿಸಲ್ಲಿಸಿದ ಪ್ರತಿಯನ್ನು ಹಾಜರುಪಡಿಸಿದರು ಸಂಪರ್ಕ ಕಲ್ಪಿಸುವುದಾಗಿ ಅಧೀಕ್ಷಕರು ತಿಳಿಸಿದರು.ಕೋಟ ಉಪವಿಭಾಗದ ಮುಖ್ಯಸ್ಥ ಪ್ರತಾಪ್‌ಚಂದ್ರ ಹಾಗೂ ಮೆಸ್ಕಾಂ ಅಧಿಕಾರಿಗಳಾದ ಗುರುಪ್ರಸಾದ್, ವೈಭವ ಶೆಟ್ಟಿ ಹಾಗೂ ಶರಣಪ್ಪ ಮತ್ತು ವಿದ್ಯುತ್ ಗುತ್ತಿಗೆದಾರರು, ಗ್ರಾಹಕರು ಉಪಸ್ಥಿತರಿದ್ದರು.