Advertisement
ಈ ಹಿಂದೆ ಹೆದ್ದಾರಿ ನಿರ್ವಹಣೆಯನ್ನು ಹೊಸದಾಗಿ ಪಡೆದ ಹೈವೇ ಕನ್‌ಸ್ಟ್ರಕ್ಷನ್ಸ್ ಕಂಪನಿ ರಸ್ತೆಯ ಮರು ಡಾಂಬರೀಕರಣ ಕೆಲಸವನ್ನು ಆರಂಭಿಸಿತ್ತು. ಉಡುಪಿಯಿಂದ ಸಾಸ್ತಾನದ ತನಕ ಡಾಂಬರೀಕರಣ ನಡೆಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಸಾಸ್ತಾನ ಟೋಲ್ ಸಮೀಪದಲ್ಲೇ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮಳೆಗಾಲವಾದ್ದರಿಂದ ಗುಂಡ್ಮಿ, ಸಾಲಿಗ್ರಾಮ, ಕೋಟ, ತೆಕ್ಕಟ್ಟೆ ಕೋಟೇಶ್ವರ ಮೊದಲಾದ ಕಡೆ ರಸ್ತೆಯ ಗುಂಡಿಗಳು ಬೃಹತ್ ಗಾತ್ರದಲ್ಲಿ ಬಾಯ್ತರೆದಿದೆ. ರಾತ್ರಿ ವೇಳೆ ಬೈಕ್ ಸವಾರರು ಹೊಂಡವನ್ನು ಗಮನಿಸದೆ ಸ್ಕಿಡ್ ಆಗಿ ಬೀಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ. ಕಾರು ಮೊದಲಾದ ಘನ ವಾಹನಗಳು ಹೊಂಡ ತಪ್ಪಿಸುವ ಬರದಲ್ಲಿ ಅಪಘಾತವಾಗುತ್ತಿದೆ. ಆದ್ದರಿಂದ ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸ ಆಗಬೇಕು ಹಾಗೂ ಸಾಸ್ತಾನದಿಂದ ಕುಂದಾಪುರ ತನಕ ಬಾಕಿ ಉಳಿದಿರುವುದ ಮರು ಡಾಂಬರೀಕರಣ ಕಾಮಗಾರಿ ಆದಷ್ಟು ಶೀಘ್ರ ನಡೆಯಬೇಕು ಎನ್ನುವ ಬೇಡಿಕೆ ಇದೆ.
ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಹೊಂಡಗಳಿಂದ ವಾಹನ ಸವಾರರಿಗೆ ಸಂಚರಿಸಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಇದಕ್ಕೆ ಪರಿಹಾರ ಅಗತ್ಯವಿದೆ. ಈ ಬಗ್ಗೆ ನಿರ್ವಹಣಾ ಕಂಪನಿಯ ಗಮನಕ್ಕೂ ಸಮಸ್ಯೆಯನ್ನು ತರಲಾಗಿದ್ದು ಶೀಘ್ರವಾಗಿ ಕಾಮಗಾರಿ ಆರಂಭಿಸಬೇಕು ಎಂದು ಸಾಸ್ತಾನದ ಹೆದ್ದಾರಿ ಜಾಗೃತಿ ಸಮಿತಿ ಪ್ರಮುಖರಾದ ಪ್ರತಾಪ್ ಶೆಟ್ಟಿ ಆಗ್ರಹಿಸಿದ್ದಾರೆ.
Related Articles
ಉಡುಪಿಯಿಂದ-ಕುಂದಾಪುರ ತನಕ ರಸ್ತೆಯಲ್ಲಿ ಹೊಂಡ, ನೀರು ನಿಲ್ಲುವುದು, ಬೀದಿ ದೀಪ, ವಾಹನ ಸಂಚಾರಕ್ಕೆ ಸಮಸ್ಯೆ ಮೊದಲಾದ ಸಮಸ್ಯೆಗಳಿದ್ದರೆ ಸ್ಥಳೀಯ ಸಾಸ್ತಾನ ಟೋಲ್‌ನ ಸಾರ್ವಜನಿಕ ಸಂಪರ್ಕ ಸಂಖ್ಯೆ 8130006595 ಕರೆ ಮಾಡಿ ದೂರು ನೀಡಬಹುದು.
Advertisement
ಶೀಘ್ರ ಕಾಮಗಾರಿ ಆರಂಭತಾಂತ್ರಿಕ ಕಾರಣದಿಂದ ಮರು ಡಾಂಬರೀಕರಣ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಸಾಸ್ತಾನದಿಂದ-ಕುಂದಾಪುರ ತನಕ ಮರು ಡಾಂಬರೀಕರಣವನ್ನು ಶೀಘ್ರ ಆರಂಭಿಸಲಾಗುವುದು. ಜತೆಗೆ ರಸ್ತೆಯ ಹೊಂಡಗಳಿಗೂ ತೇಪೆ ಹಾಕುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ.
-ತಿಮ್ಮಯ್ಯ, ಉಡುಪಿ ಟೋಲ್‌ಗಳ ಮ್ಯಾನೇಜರ್ -ರಾಜೇಶ್ ಗಾಣಿಗ ಅಚ್ಲಾಡಿ