Advertisement
ಆರೋಪಿಗಳು ಹಿರಿಯಡಕ ಜೈಲಿಗೆಆರೋಪಿಗಳು ಕ್ರಿಮಿನಲ್ ಹಾಗೂ ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದಾರೆ. ಉಡುಪಿಯ ಹಿರಿಯಡಕ ಸಬ್ ಜೈಲಿನಲ್ಲಿರುವ ಆರೋಪಿಗಳು ಒಳಸಂಚು ಮಾಡುತ್ತಾರೆ, ಕೆಲವರು ರೌಡಿ ಶೀಟರ್ ಆಗಿರುವುದರಿಂದ ಜೈಲಿನಲ್ಲಿ ಶಾಂತಿಭಂಗ ಮಾಡುತ್ತಾರೆ, ಕೆಲವರು ರಾಜಕೀಯ ಪ್ರಭಾವ ಬಳಸುತ್ತಾರೆ. ಸಾಕ್ಷಾಧಾರಗಳ ಮೇಲೆ ಪ್ರಭಾವ ಬೀರುತ್ತಾರೆ. ಆದ್ದರಿಂದ ಈ ಪ್ರಕರಣದ ಎಲ್ಲ ಆರೋಪಿಗಳನ್ನು ಕಾರವಾರ ಹಾಗೂ ಶಿವಮೊಗ್ಗ ಜೈಲಿಗೆ ಕಳುಹಿಸಬೇಕು ಎಂದು ಬೆಂಗಳೂರಿನ ಬಂದಿಖಾನೆ ಮಹಾನಿರೀಕ್ಷಕರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಶನಿವಾರ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ಆರೋಪಿಗಳ ಪರವಾಗಿ ರವಿಕಿರಣ್ ಮುರ್ಡೆಶ್ವರ್ ಸುದೀರ್ಘವಾದ ಮಂಡಿಸಿದ್ದರು. ಇದನ್ನು ಪುರಸ್ಕರಿಸಿ ಆರೋಪಿಗಳನ್ನು ಹಿರಿಯಡಕ ಸಬ್ ಜೈಲಿಗೆ ಕಳುಹಿಸಲಾಗಿದೆ.
ಆರೋಪಿಗಳನ್ನು ಬೇರೆ ಜೈಲಿಗೆ ಹಂಚಿಕೆ ಮಾಡಬೇಕು ಎಂಬ ಮನವಿಯಲ್ಲಿರುವ ಅಂಶ ಸರಿಯಲ್ಲ. ಅವರನ್ನು ಹಿರಿಯಡಕದಲ್ಲಿಯೇ ಇರಿಸಬೇಕು ಎಂದು ಆರೋಪಿ ಪರ ವಕೀಲರು ವಾದಿಸಿದರು. ಕಳೆದ ಹದಿನೈದು ದಿನಗಳ ಅಂತರದಲ್ಲಿ ಆರೋಪಿಗಳು ಜೈಲಿನಲ್ಲಿ ಯಾವುದೇ ಗಲಾಟೆ ಮಾಡಿಲ್ಲ, ಆರೋಪಿಗಳ ಕುಟುಂಬಿಕರು ಕೂಡ ಸ್ಥಳೀಯರಾಗಿದ್ದಾರೆ. ಕೆಲವು ಆರೋಪಿಗಳಿಗೆ ಆರೋಗ್ಯ ಸಮಸ್ಯೆಯಿದೆ. ಕುಂದಾಪುರ ನ್ಯಾಯಾಲಯ ಹಾಗೂ ಪ್ರಕರಣ ನಡೆದ ಕೋಟ ಪೊಲೀಸ್ ಠಾಣೆ ವ್ಯಾಪ್ತಿಗೆ ಹಿರಿಯಡಕ ಸಬ್ ಜೈಲನ್ನು ನೀಡಲಾಗುತ್ತದೆ. ಆರೋಪಿಗಳನ್ನು ಬೇರೆ ಕಡೆಗೆ ರವಾನಿಸುವುದು ಅಸ್ವಾಭಾವಿಕವಾಗುತ್ತದೆ. ಇದಕ್ಕೆ ಸಮರ್ಪಕ ಕಾರಣವನ್ನೂ ಅಧಿಕಾರಿಗಳು ನೀಡಿಲ್ಲ. ಅದಕ್ಕಾಗಿ ಆರೋಪಿಗಳನ್ನು ಹಿರಿಯಡಕ ಜೈಲಿನಲ್ಲೇ ಇರಿಸಬೇಕು ಎಬ ವಾದವನ್ನು ನ್ಯಾಯಾಧೀಶರು ಪುರಸ್ಕರಿಸಿದರು.