Advertisement

Kota; ಸಹಸ್ರ ಕುಂಭಾಭಿಷೇಕ, ಸ್ವರ್ಣ ಪೀಠ ಪ್ರಭಾವಳಿ ಸಮರ್ಪಣೆ

12:08 AM Feb 11, 2024 | Team Udayavani |

ಕೋಟ: ವಾರಾಣಸಿ ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠವಾದ ಕೋಟ ಶ್ರೀಕಾಶೀ ಮಠದ ಮುರಲೀಧರ ಕೃಷ್ಣ ದೇವರ ಮೂಲ ಪ್ರತಿಷ್ಠಾ ಶತಮಾನೋತ್ಸವದ ಅಂಗವಾಗಿ ಸಹಸ್ರ ಕುಂಭಾಭಿಷೇಕ ಮತ್ತು ಉತ್ಸವ ದೇವರಿಗೆ ಸ್ವರ್ಣ ಪೀಠ ಪ್ರಭಾವಳಿ ಸಮರ್ಪಣೆ ಶನಿವಾರ ಜರಗಿತು.

Advertisement

ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಫಲಾಹಾರ, ಭೋಜನ ಪ್ರಸಾದ ವಿತರಣೆ ನಡೆಯಿತು.

ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ. ನರಸಿಂಹ ಪ್ರಭು, ಉಪಾಧ್ಯಕ್ಷ ಎಸ್‌.ಶ್ರೀನಿವಾಸ್‌ ಶ್ಯಾನುಭಾಗ್‌, ಖಜಾಂಚಿ ಎಂ. ಗೌತಮ್‌ ಶೆಣೈ, ಕಾರ್ಯದರ್ಶಿ ಬಿ. ಗೌರೀಶ್‌ ಶೆಣೈ, ಜತೆ ಕಾರ್ಯದರ್ಶಿ ಪ್ರಶಾಂತ್‌ ಪೈ., ಸದಸ್ಯರಾದ ಕೆ. ರಘುರಾಮ್‌ ನಾಯಕ್‌, ಕೆ. ಕಪಿಲದಾಸ್‌ ಭಟ್‌, ಕೆ. ಜಗದೀಶ್‌ ನಾಯಕ್‌, ಕೆ. ವೆಂಕಟೇಶ್‌ ಪ್ರಭು, ಕೆ. ಪುರಂದರ ಕಾಮತ್‌, ಎಂ. ಪುರುಷೋತ್ತಮ ಪೈ., ಕೆ. ಚಂದ್ರಕಾಂತ್‌ ಪೈ., ಅರ್ಚಕರಾದ ದೇವದತ್ತ ಭಟ್‌, ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್‌ ಕೋಟ, ಉಪಾಧ್ಯಕ್ಷರಾದ ಶ್ರೀಧರ ವಿ. ಕಾಮತ್‌, ಭಾನುಪ್ರಕಾಶ್‌ ಪೈ ಕೊಚ್ಚಿ, ಎಂ. ರಮೇಶ್‌ ಪಡಿಯಾರ್‌ ಮಣೂರು, ಎಸ್‌. ದಿನಕರ ಶೆಣೈ ಕುಂದಾಪುರ, ಪ್ರಧಾನ ಕಾರ್ಯದರ್ಶಿ ದಿನೇಶ್‌ ಜಿ. ಕಾಮತ್‌, ಖಜಾಂಚಿ ಬಿ. ನಾರಾಯಣ ಪೈ ಉಪ್ಪಿನಕೋಟೆ, ಸಹ ಕಾರ್ಯದರ್ಶಿ ಯು. ಅನಂತರಾಮ ಶೆಣೈ, ಅರವಿಂದ ಭಟ್‌ ಕೋಟ, ಸಹಖಜಾಂಚಿ ಪ್ರದೀಪ್‌ ಪೈ. ಮೊದಲಾದವರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next