Advertisement
ಈ ಹಿಂದೆ ಬುಧವಾರ ಇಲ್ಲಿನ ಹೋಟೆಲ್‌ವೊಂದರ ಮಾಲೀಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು ರೋಗಿಯನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಿ ಮನೆ, ಹೋಟೆಲ್ ಸೀಲ್‌ಡೌನ್ ಮಾಡಲಾಗಿತ್ತು ಹಾಗೂ ಸಿಬಂದಿ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿರುವವರಿಗೆ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು. ಇದೀಗ ಹೋಟೆಲ್ ಮಾಲೀಕನ ಸಂಪರ್ಕದಲ್ಲಿದ್ದ 5ಮಂದಿ ಸಿಬಂದಿಗಳಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಮತ್ತು ಹೋಟೆಲ್ ಪಕ್ಕದ ದಿನಬಳಕೆಯ ಅಂಗಡಿಯೊಂದರ ಮಾಲೀಕನ ಕುಟುಂಬದ ನಾಲ್ಕು ಮಂದಿಗೆ ಸೋಂಕು ಕಂಡು ಬಂದಿದೆ. ಆದರೆ ಅಂಗಡಿ ಮಾಲೀಕನೂ ಕೂಡ ತಪಾಸಣೆಗೆ ಒಳಗಾಗಿದ್ದು ವರದಿ ನೆಗಿಟಿವ್ ಬಂದಿದೆ.
ಹೋಟೆಲ್‌ಗೆ ಪ್ರತಿದಿನ ನೂರಾರು ಮಂದಿ ಗ್ರಾಹಕರು ಭೇಟಿ ನೀಡುತ್ತಾರೆ ಹೀಗಾಗಿ ಮಾಲೀಕನಿಗೆ ಸೋಂಕು ತಗಲಿದಾಗಲೇ ಸ್ಥಳೀಯರು ಸಾಕಷ್ಟು ಆತಂಕಗೊಂಡಿದ್ದರು. ಇದೀಗ ಸಿಬಂದಿಗಳಿಗೂ ಇರುವುದು ದೃಢವಾಗಿರುವುದರಿಂದ ಮತ್ತಷ್ಟು ಆತಂಕ ಮನೆ ಮಾಡಿದೆ. ಕೋಟ ಕಂದಾಯ ಅಧಿಕಾರಿ ರಾಜು, ವಿ.ಎ. ಚೆಲುವರಾಜ್, ಕೋಟ ಗ್ರಾ.ಪಂ. ಪಿ.ಡಿ.ಒ. ಸುರೇಶ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಮತ್ತು ಮನೆಯನ್ನು ಸೀಲ್‌ಡೌನ್ ಮಾಡಿದ್ದಾರೆ. ಹೋಟೆಲ್ ಕಾರ್ಮಿಕರ ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ.