Advertisement

Kota; ಬನ್ನಾಡಿ: ಸಾವಿನಲ್ಲೂ ಒಂದಾದ ದಂಪತಿ

11:38 PM Aug 02, 2024 | Team Udayavani |

ಕೋಟ: ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕೋಟ ಸಮೀಪದ ಬನ್ನಾಡಿ ಕಂಬಳಕಟ್ಟಿನಲ್ಲಿ ಆ.1ರಂದು ನಡೆದಿದೆ.

Advertisement

ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ (58) ಹಾಗೂ ಅವರ ಪತ್ನಿ ಮುತ್ತು ಪೂಜಾರ್ತಿ (53) ಒಂದೇ ದಿನ ಕೊನೆಯುಸಿರೆಳೆದಿದ್ದು, ಇವರು ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ದಂಪತಿಗೆ ವಾರದಿಂದ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಬುಧವಾರ ತಡರಾತ್ರಿ ಮುತ್ತು ಮೃತಪಟ್ಟಿದ್ದು, ಗುರುವಾರ ಸಂಜೆ ಕೃಷ್ಣ ಅವರು ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು.

ಕೃಷ್ಣ ಪೂಜಾರಿ ಕಂಬಳದ ಸ್ವಯಂ ಸೇವಕರಾಗಿ ಹಾಗೂ ಹೈನುಗಾರಿಕೆ ಯಲ್ಲಿ ತೊಡಗಿಸಿಕೊಂಡಿದ್ದರು. ಮುತ್ತು ಪೂಜಾರ್ತಿ ಅವರು ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next