Advertisement

ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸಾರಿಗೆ ನೌಕರರಲ್ಲಿ ಕೋಟ ಮನವಿ

04:32 PM Apr 11, 2021 | Team Udayavani |

ಮಂಗಳೂರು : ಕೋವಿಡ್ ಕಾರಣದಿಂದಾಗಿ ಜನತೆ ಆತಂಕ ಪಡುತ್ತಿರುವ ಈ ಸಂದರ್ಭದಲ್ಲಿ ಮುಷ್ಕರ ಹೂಡಿ ಸಾರ್ವಜನಿಕರನ್ನು ಇನ್ನಷ್ಟು ಸಂಕಷ್ಟಕ್ಕೆ ಒಳಪಡಿಸುವುದು ಸರಿಯಲ್ಲ, ಸರಕಾರದಲ್ಲಿ ವಿಶ್ವಾಸವಿಟ್ಟು, ಮುಂದಿನ ದಿನಗಳಲ್ಲಿ ನೌಕರರ ಸಮಸ್ಯೆಗಳು ಪರಿಹಾರವಾಗಲಿವೆ ಎಂಬ ಭರವಸೆಯೊಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.

Advertisement

ಆರನೇ ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕೂಟ ನಡೆಸುತ್ತಿರುವ ಅನಿರ್ದಿಷ್ಟಾವಧಿಯ ಮುಷ್ಕರ ಐದನೇ ದಿನವು ಮುಂದುವರೆದಿದ್ದರೂ ಸಹ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ ಮಂಗಳೂರು ಮತ್ತು ಪುತ್ತೂರು ವಿಭಾಗದಿಂದ ಕಾರ್ಯಾಚರಣೆಯಾಗುತ್ತಿರುವ ಅನುಸೂಚಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಯವರು ಮಾಹಿತಿ ಒದಗಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಪ್ರತಿ ದಿವಸ ಸುಮಾರು 480 ಅನುಸೂಚಿ ವಾಹನಗಳು ಕಾರ್ಯಾಚರಣೆಯಾಗುತ್ತಿದ್ದು, ಪ್ರಸ್ತುತ ಮುಷ್ಕರದ ಅವಧಿಯಲ್ಲಿ ದಿನಾಂಕ 10.04.2021ರಂದು ಸುಮಾರು 140 ವಾಹನಗಳು ಬೆಂಗಳೂರು, ಮೈಸೂರು, ಧರ್ಮಸ್ಥಳ, ಹುಬ್ಬಳ್ಳಿ, ಕಾಸರಗೋಡು  ಹೈದ್ರಾಬಾದ್, ಮಧುರೈ ,ಕೊಯಮತ್ತೂರು, ಮಂತ್ರಾಲಯ ಮುಂತಾದ ಮಾರ್ಗಗಳಲ್ಲಿ ಕಾರ್ಯಾಚರಿಸುತ್ತವೆ.

ಅದೇ ರೀತಿಯಾಗಿ ಈ ಮೇಲಿನ ಮಾರ್ಗಗಳಲ್ಲಿ ದಿನಾಂಕ 11.4.2021 ರಂದು ಸುಮಾರು 200 ವಾಹನಗಳಲ್ಲಿ  ಸಾರ್ವಜನಿಕ ಪ್ರಯಾಣಿಕರಿಗೆ  ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಾಹನಗಳನ್ನು ಕಾರ್ಯಾಚರಿಸಲು ಎಲ್ಲಾ ಅಗತ್ಯ ಯೋಜನೆಗಳನ್ನು ಮಂಗಳೂರು ವಿಭಾಗದಿಂದ ಹಮ್ಮಿಕೊಳ್ಳಲಾಗಿರುತ್ತದೆ . ವಿಭಾಗದ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಕರ್ತವ್ಯಕ್ಕೆ ಮರಳುತ್ತಿದ್ದು ಇನ್ನೂ ಹೆಚ್ಚಿನ ವಾಹನಗಳನ್ನು ಕಾರ್ಯಾಚರಣೆಗೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ .

ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಪುತ್ತೂರು ವಿಭಾಗದಲ್ಲಿಯೂ ಸಹ ವಾಹನಗಳ ಕಾರ್ಯಾಚರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದಿನಾಂಕ 10.04.2021ರಂದು  47 ವಾಹನಗಳು ಮತ್ತು ದಿನಾಂಕ 11.04.2021 ರಂದು ಸುಮಾರು 75 ವಾಹನಗಳನ್ನು ಬೆಂಗಳೂರು ಮೈಸೂರು ಶಿವಮೊಗ್ಗ ಪುತ್ತೂರು ಮಡಿಕೇರಿ ಮುಂತಾದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ .

Advertisement

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗ ಹಾಗೂ ಪುತ್ತೂರು ವಿಭಾಗಗಳ ವತಿಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅನುಸೂಚಿ ವಾಹನಗಳನ್ನು ನಿಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಈಗಾಗಲೇ ಕರ್ತವ್ಯಕ್ಕೆ ಹಾಜರಾದ ನೌಕರರೆಲ್ಲರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇನ್ನುಳಿದ ನೌಕರರು ಕೂಡ ಕರ್ತವ್ಯಕ್ಕೆ ಹಾಜರಾಗಿ ಈ ಕೊರೋನಾ ಸಂಕಷ್ಟ ಕಾಲದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಸಚಿವ ಕೋಟ ಮನವಿ ಮಾಡಿ ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next