ಕೋಟ: ಪುಷ್ಕರಿಣಿ ಹೊಂದಿರುವ ದೇಗುಲಗಳು ಅತ್ಯಂತ ಶ್ರೇಷ್ಠವಾದ ಧಾರ್ಮಿಕ ತಾಣಗಳಾಗಿರುತ್ತದೆ ಹಾಗೂ ಶಿಥಿಲಗೊಂಡ ಪುಷ್ಕರಿಣಿ ಜೀರ್ಣೋದ್ಧಾರದಿಂದ ದೇಗುಲದ ದೈವೀಶಕ್ತಿ ಉಜ್ವಲಗೊಳ್ಳುತ್ತದೆ ಎಂದು ಬಸ್ರೂರು ಮಹಾಲಿಂಗೇಶ್ವರ ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಅ.17ರಂದು ಅಚ್ಲಾಡಿ ಶ್ರೀಸಿದ್ಧಿವಿನಾಯಕ ದೇಗುಲದ ಪುನರ್ ನವೀಕೃತ ತೀರ್ಥ ಪುಷ್ಕರಿಣಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್ ಪುಷ್ಕರಿಣಿಯ ಶಾಶ್ವತ ಫಲಕ ಅನಾವರಣಗೊಳಿಸಿ ಮಾತನಾಡಿ, ಅಚ್ಲಾಡಿ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಉತ್ತಮ ಶಕ್ತಿ ಇದೆ. ಹೀಗಾಗಿ ಕ್ಷೇತ್ರಕ್ಕೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳು ಇಲ್ಲಿ ಅತ್ಯಂತ ಸುಲಭವಾಗಿ ನೆರವೇರುತ್ತಿದೆ ಎಂದರು.
ಆಗಮಶಾಸ್ತ್ರ ಪ್ರವೀಣರು ಹಾಗೂ ಕ್ಷೇತ್ರದ ತಂತ್ರಿಗಳಾದ ಬಾಕೂìರು ವೇ| ಮೂ| ಹೃಷೀಕೇಶ ಬಾಯರಿ ಅವರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕ್ಷೇತ್ರದ ಧಾರ್ಮಿಕ ಮಹತ್ವ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಮಾತನಾಡಿದರು.ಪುಷ್ಕರಿಣಿ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಅಚ್ಲಾಡಿ ಅಡಾರ್‌ಮನೆ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಆನಂದ ಸಿ.ಕುಂದರ್, ಅಪ್ಪಣ ಹೆಗ್ಡೆ, ವೇ| ಮೂ| ಹೃಷೀಕೇಶ ಬಾಯರಿ, ಚಂದ್ರಶೇಖರ್ ಶೆಟ್ಟಿ ಅಚ್ಲಾಡಿ ಅಡಾರ್‌ಮನೆ ಹಾಗೂ ಕ್ಷೇತ್ರದ ಅರ್ಚಕರು, ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರು, ಪುಷ್ಕರಣಿಯ ಶಿಲ್ಪಿಗಳು, ಎಂಜಿನಿಯರ್, ದಾನಿಗಳು, ಸಹಕರಿಸಿದವರನ್ನು ಗೌರವಿಸಲಾಯಿತು.
ವಡ್ಡರ್ಸೆ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊತ್ತಾಡಿ ಉದಯ ಕುಮಾರ್ ಶೆಟ್ಟಿ, ಸಿದ್ಧಿವಿನಾಯಕ ಕ್ಷೇತ್ರದ ಅರ್ಚಕ ಮಂಜುನಾಥ ಹೇರ್ಳೆ, ವಸಂತ ಶೆಟ್ಟಿ ಸೂರಿಬೆಟ್ಟು, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಜಯಕರ ಹೆಗ್ಡೆ ಅಚ್ಲಾಡಿ ಅಡಾರ್‌ಮನೆ, ಎಂಜಿನಿಯರ್ ಗುರುರಾಜ್ ಆಚಾರ್ಯ ಉಪಸ್ಥಿತರಿದ್ದರು.
ಪುಷ್ಕರಿಣಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಡಾರ್ ಮನೆ ಸ್ವಾಗತಿಸಿ, ಸಮಿತಿಯ ಪ್ರಮುಖರಾದ ಶಿವರಾಮ ಕೆ.ಎಂ. ಪ್ರಾಸ್ತಾವಿಕ ಮಾತನಾಡಿದರು. ಭುಜಂಗ ಶೆಟ್ಟಿ ಅಚ್ಲಾಡಿ ಅಡಾರ್‌ಮನೆ, ಪ್ರಕಾಶ್ ಆಚಾರ್ಯ, ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ಸಮ್ಮಾನಿತರನ್ನು ಪರಿಚಯಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.