Advertisement

ಕೋಟ : 30 ರ ಹರೆಯದ ಮಹಿಳೆ ಹಠಾತ್ ಹೃದಯಾಘಾತದಿಂದ ಸಾವು

10:32 PM Dec 14, 2022 | Team Udayavani |

ಕೋಟ: 30 ರ ಹರೆಯದ ಮಹಿಳೆಯೊಬ್ಬರು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಕೋಟ ಪಡುಕರೆ ನಿವಾಸಿ ಭವ್ಯ (30) ಡಿ.13ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಮೃತರು ಪತಿಯನ್ನು ಅಗಲಿದ್ದಾರೆ .

ಈಕೆ ಕೋಟ ಪಡುಕರೆ ಖಾಸಗಿ‌ ಮೀನು ಸಂಸ್ಕರಣಾ ಫ್ಯಾಕ್ಟರಿಯಲ್ಲಿ ಕಚೇರಿ ಸಿಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮನೆಯಲ್ಲಿಯೇ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.

ಯುವಜನರು ಹಠಾತ್ ಸಾವನ್ನಪ್ಪುತ್ತಿರುವ ಹಲವು ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿರುವುದು ಹಲವರಲ್ಲಿ ಆತಂಕ ಹುಟ್ಟು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next