Advertisement
ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸಂಚಾರ, ನಡೆದಾಡುವುದೂ ಸಮಸ್ಯೆಯಾಗಿದೆ. ಆದ್ದರಿಂದ ಕೇವಲ ತೇಪೆ, ರಿಪೇರಿ ಮಾತ್ರ ನಡೆಸದೆ ಪ್ರಧಾನಿ ಗ್ರಾಮ್ ಸಡಕ್ ಯೋಜನೆಯ ಮೂಲಕ ಸಂಪೂರ್ಣ ರಸ್ತೆ ಅಭಿವೃದ್ಧಿ ಪಡಿಸಬೇಕೆನ್ನುವುದು ಇಲ್ಲಿನವರ ಆಗ್ರಹವಾಗಿದೆ.
ಚಾರುಕೊಟ್ಟಿಗೆಯಿಂದ ಕೊರ್ಗಿ ಸಂಪರ್ಕ ಕಲ್ಪಿಸುವ ಈ ಮಾರ್ಗದ ಸರಕಾರಿ ಗುಡ್ಡೆ ಸೇರಿದಂತೆ ಕೆಲವು ಭಾಗಗಳಲ್ಲಿ ಪ್ಲಾಸ್ಟಿಕ್ ಹಾಗೂ ಕೋಳಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಈ ಬಗ್ಗೆಯೂ ಸ್ಥಳೀಯಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸುವ್ಯವಸ್ಥಿತ ರಸ್ತೆ
ಮುಂದಿನ ದಿನಗಳಲ್ಲಿ ಕೊರ್ಗಿಯಿಂದ ಶಿರಿಯಾರದವರೆಗೆ ಸುವ್ಯವಸ್ಥಿತವಾದ ರಸ್ತೆ ನಿರ್ಮಾಣವಾಗಲಿದೆ.
– ಗೌರೀಶ್ ಹೆಗ್ಡೆ ಉಪಾಧ್ಯಕ್ಷರು,
ಗ್ರಾ.ಪಂ. ಕೊರ್ಗಿ