ನವದೆಹಲಿ: ಮೆಟ್ಟಿಲಿನಿಂದ ಇಳಿಯುವಾಗ ಕೆಳಕ್ಕೆ ಬಿದ್ದು ಖ್ಯಾತ ಕೊರಿಯನ್ ನಟಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಪಾರ್ಕ್ ಸೂ ರ್ಯುನ್ (29) ಮೃತ ನಟಿ.
ಜೂ. 11 ರಂದು ಮನೆಗೆ ವಾಪಾಸ್ ಆಗುವ ವೇಳೆ ನಟಿ ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರೀಕ್ಷಿಸಿದ ಬಳಿಕ ವೈದ್ಯರು ನಟಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದಿದ್ದಾರೆ. ನಟಿಯ ಕುಟುಂಬಸ್ಥರು ಅಂಗಾಂಗ ದಾನವನ್ನು ಮಾಡಲು ನಿರ್ಧರಿಸಿದ್ದಾರೆ.
1994 ರಲ್ಲಿ ಹುಟ್ಟಿದ ಪಾರ್ಕ್ ಸೂ ರ್ಯುನ್ 2018 ರಲ್ಲಿ ಬಂದ ಕೊರಿಯಾದ “ಇಲ್ ಟೆನೋರ್”( Il Tenore) ಮೂಲಕ ನಟನಾ ಲೋಕಕ್ಕೆ ಕಾಲಿಟ್ಟರು. “ಫೈಂಡಿಂಗ್ ಮಿಸ್ಟರ್ ಡೆಸ್ಟಿನಿ” (Finding Mr. Destiny), “ಡೇಸ್ ವಿ ಲವ್ಡ್”( The Days We Loved), ‘ದಿ ಸೆಲರ್” (THE CELLAR) ಸಿನಿಮಾದಲ್ಲಿ ನಟಿಸಿದ್ದಾರೆ.
“ಸ್ನೋಡ್ರಾಪ್” ಎಂಬ ಜನಪ್ರಿಯ ಸಿರೀಸ್ ನಲ್ಲಿ ಅವರ ಅಭಿನಯ ಅಪಾರ ಮಂದಿಯನ್ನು ಸೆಳೆದಿತ್ತು.
ಜೂ.13 ರಂದು ನಟಿಯ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ವರದಿ ತಿಳಿಸಿದೆ.