ಕೊರಟಗೆರೆ : ತಾಲ್ಲೂಕಿನ ಚೆನ್ನರಾಯನದುರ್ಗ ಹೋಬಳಿಯ ಗೌಜಗಲ್ ಗ್ರಾಮದ ಶಶಿಧರ ಮತ್ತು ರವಿಕುಮಾರ್ ಎಂಬ ಇಬ್ಬರು ಯುವಕರು ಬೈಕ್ ನಲ್ಲಿ ದೇವರ ಪೂಜೆಗೆಂದು ಕರ್ಕೆ ಮರದಟ್ಟಿ ಮಾರಮ್ಮ ನ ದೇವಸ್ಥಾನ ಬಳಿ ಹೋಗಿ ಪೂಜೆ ಮಾಡಿಸಿಕೊಂಡು ಊಟ ಮಾಡಿ ರಾತ್ರಿ 9 ಗಂಟೆ ಸಮಯದಲ್ಲಿ ವಾಪಸ್ಸು ಮನೆಗೆ ಬರಲು ಕರಿಕೆ ಮರದ ಹಟ್ಟಿ ಮಾರಮ್ಮನ ದೇವಸ್ಥಾನ ದ ಸಮೀಪದಲ್ಲಿ ನಿಂತು ಕೊಂಡಿದ್ದಾಗ,ಆರೋಪಿ ರವಿಕುಮಾರ್ ಹರಿತವಾದ ಆಯುಧದಿಂದ ಹೊಡೆದು ಶಶಿಧರ್ ಎಂಬ ಯುವಕನನ್ನು ಕೊಲೆ ಮಾಡಲು ಯತ್ನಿಸಿದಾಗ ರವಿಕುಮಾರ್ ತಪ್ಪಿಸಿಕೊಳ್ಳಲು ಹೋದಾಗ ಬಲಗೈ ಬೆರಳಿಗೆ ಭೀಕರವಾದ ಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದಾಗ ಕುತ್ತಿಗೆಗೆ ಹರಿತವಾದ ಆಯುಧದಿಂದ ಸೀಳಿದ್ದು ನಂತರ ಆರೋಪಿ ರವಿ ಕುಮಾರ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:ಬಿಟ್ ಕಾಯಿನ್ ಪ್ರಕರಣ: ನಮಗೆ ದಾಖಲೆ ಕೊಡುತ್ತಿರುವುದೇ ಬಿಜೆಪಿ ಸಚಿವರು: ಡಿಕೆಶಿ
ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದ ಗಾಯಾಳು ಶಶಿಧರ್(20) ನನ್ನು ಯಾವುದೋ ವಾಹನದಲ್ಲಿ ಕೊರಟಗೆರೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ , ನಂತರ ವೈದ್ಯರ ಸಲಹೆ ಮೇರೆಗೆ ಆ್ಯಂಬುಲೆನ್ಸ್ ನಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಐಪಿಸಿ 307 ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು , ಘಟನಾ ಸ್ಥಳಕ್ಕೆ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ,ಪಿಎಸ್ಐ ನಾಗರಾಜು.ಬಿ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಆರೋಪಿಯ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.