ಕೊರಟಗೆರೆ: 10 ದಿನಗಳಿಂದ ಬುಕ್ಕಾಪಟ್ಟಣ ದಲಿತ ಕಾಲೋನಿ ಕುಡಿಯುವ ನೀರು ಸರಬರಾಜು ಸ್ಥಗಿತವಾಗಿದೆ.. ಪ್ರತಿನಿತ್ಯ ಕೊಳಚೆಯುಕ್ತ ಟ್ಯಾಂಕರ್ ನೀರು ಸರಬರಾಜು ಮಾಡಲಾಗ್ತಿದೆ.. ಕುಡಿಯುವ ನೀರು ಸರಬರಾಜು ವಿಚಾರವಾಗಿ ನಮಗೇ ತಾರತಮ್ಮ ಮಾಡಲಾಗ್ತೀದೆ.. ನಮ್ಮೂರಿಗೆ ತಕ್ಷಣ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿ ಬುಕ್ಕಾಪಟ್ಟಣ ಗ್ರಾಪಂಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬುಕ್ಕಾಪಟ್ಟಣ ಗ್ರಾಪಂ ವ್ಯಾಪ್ತಿಯ ಬುಕ್ಕಾಪಟ್ಟಣದ ದಲಿತ ಕಾಲೋನಿಗೆ ಕಳೆದ ೧೦ದಿನಗಳಿಂದ ನೀರಿನ ಸಂಪರ್ಕ ಕಡಿತ ಮಾಡಲಾಗಿದೆ. ಗೊಲ್ಲರಹಟ್ಟಿ, ಗೊಂದಿಹಳ್ಳಿ ಮತ್ತು ಬುಕ್ಕಾಪಟ್ಟಣಕ್ಕೆ ಸರಬರಾಜು ಆಗುವ ನೀರು ನಮ್ಮ ದಲಿತ ಕಾಲೋನಿಗೆ ಏಕೆ ಬರುತ್ತಿಲ್ಲ ಎಂದು ಗ್ರಾಪಂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬುಕ್ಕಾಪಟ್ಟಣ ಕಾಲೋನಿಯ ಸ್ಥಳೀಯ ಮಹಿಳೆ ಲಕ್ಷ್ಮಮ್ಮ ಮಾತನಾಡಿ ನಮಗೇ ಕಳೆದ 10 ದಿನಗಳಿಂದ ಕುಡಿಯುವ ನೀರಿನ ಸಂಪರ್ಕ ಸ್ಥಗೀತ ಮಾಡಲಾಗಿದೆ. ಕಲುಷಿತ ಟ್ಯಾಂಕರ್ ನೀರು ಸೇವನೆಯಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೆಮ್ಮು-ನೆಗಡಿ ಪ್ರಾರಂಭ ವಾಗಿದೆ. ಗ್ರಾಪಂಯ ಅಧಿಕಾರಿವರ್ಗ ಅಥವಾ ಸದಸ್ಯರು ನಮ್ಮ ಸಮಸ್ಯೆ ಆಲಿಸಲು ಮೀನಾಮೇಷ ಏಣಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ಬುಕ್ಕಾಪಟ್ಟಣ ಮಹಿಳೆ ರಂಗಮ್ಮ ಮಾತನಾಡಿ ಬುಕ್ಕಾಪಟ್ಟಣ, ಇಂದಿರಾನಗರ ಮತ್ತು ಗೊಲ್ಲರಹಟ್ಟಿಗೆ ಪ್ರತಿನಿತ್ಯ ನೀರು ಸರಬರಾಜು ಆಗ್ತೀದೆ. ನಮ್ಮ ದಲಿತ ಕಾಲೋನಿಗೆ ಮಾತ್ರ ಕುಡಿಯುವ ನೀರು ಸಂಪರ್ಕ ಏಕಾಏಕಿ ಸ್ಥಗೀತವಾಗಿದೆ. ಕಲುಷಿತ ಟ್ಯಾಂಕರ್ ನೀರು ಸೇವನೆಯಿಂದ ನಮ್ಮ ಕುಟುಂಬದವರು ಖಾಯಿಲೆಗೆ ತುತ್ತಾಗಿದ್ದಾರೆ. ನಮ್ಮ ಕುಟುಂಬದ ಪ್ರತಿನಿತ್ಯದ ಸಮಸ್ಯೆ ಕೇಳೋರು ಯಾರು ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಹರೀಶ್, ದೊಡ್ಡಕಾಯಪ್ಪ, ರತ್ನಮ್ಮ, ರೇಣುಕಮ್ಮ, ಕೆಂಪರಾಜು, ಮಣ್ಣಮ್ಮ, ರತ್ನಮ್ಮ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: Congress ಪಕ್ಷವನ್ನು ಮುಸ್ಲಿಮರು ಬಲವಾಗಿ ಬೆಂಬಲಿಸುತ್ತಾರೆ: ಸಿದ್ದರಾಮಯ್ಯ