Advertisement
ತಾಲೂಕಿನ ಹೊಳವನಹಳ್ಳಿ ಬಸ್ ನಿಲ್ದಾಣದಲ್ಲಿ ತುಮಕೂರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆ ಹಾಗೂ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಸುಮಾರು ನಾಲ್ಕು ತಾಸು ಬಸ್‌ಗಳನ್ನು ತಡೆದು ಹೆಚ್ಚುವರಿ ಬಸ್‌ಗಾಗಿ ಪ್ರತಿಭಟನೆ ನಡೆಸಿದರು.ವಿದ್ಯಾರ್ಥಿಗಳು ಪ್ರತಿದಿನ ಅರಸಾಪುರ, ಬೈರೇನಹಳ್ಳಿ, ಅಕ್ಕಿರಾಂಪುರ, ಹೊಳವನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಂದ ಸುಮಾರು 500 ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ.ಅದರೆ ಸರ್ಕಾರಿ ಸಾರಿಗೆ ಬಸ್ ಪಾಸ್ ಗಳನ್ನು ಪಡೆದಿದ್ದರೂ, ಕೇವಲ ಒಂದು ಬಸ್ ಮಾತ್ರ ಬಿಟ್ಟಿದ್ದಾರೆ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
Related Articles
Advertisement
ವಿದ್ಯಾರ್ಥಿ ಚೈತ್ರಾ ಮಾತನಾಡಿ ಹೋಬಳಿಯ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಮಕೂರು ಹಾಗೂ ಕೊರಟಗೆರೆ ಕಾಲೇಜುಗಳಿಗೆ ಹೋಗಲು ಬರಲು ಸಾರಿಗೆ ಬಸ್ ಗಳು ಇಲ್ಲದೆ ತೊಂದರೆ ಉಂಟಾಗಿದೆ. ಈ ಹಿಂದೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಅಧಿಕಾರಿಗಳು ಬಸ್‌ಗಳ ವ್ಯವಸ್ಥೆ ಮಾಡಿರುವುದಿಲ್ಲ. ಅದಕ್ಕಾಗಿ ವಿದ್ಯಾರ್ಥಿ ಪರಿಷತ್ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಬಸ್ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೇಘನಾ ಕಾಲೇಜು ವಿದ್ಯಾರ್ಥಿನಿ ಮಾತನಾಡಿ ಕೆಲವು ದಿನಗಳ ಹಿಂದೆಯೂ ಸಹ ಇದೆ ರೀತಿ ಪ್ರತಿಭಟನೆ ಮಾಡಿದ್ದೇವು,ನಂತರ ಕೆಲ ದಿನಗಳು ಮಾತ್ರ ಸರಿಯಾದ ಸಮಯಕ್ಕೆ ಬಸ್ ಬರುತ್ತಿದ್ದವು, ಆದರೆ ಈಗ ಶಾಲಾ ಸಮಯಕ್ಕೆ ಒಂದು ಬಸ್ ಮಾತ್ರ ಬರುತ್ತಿದೆ. ಆ ಬಸ್ ತುಂಬಿದರೆ ಮತ್ತೆ ಯಾವುದೇ ಬಸ್ ಬರುವುದಿಲ್ಲ. ಕೆಲವೊಮ್ಮೆ ಬಸ್ ನಿಲ್ಲಸದ ಕಾರಣ ವಾಪಸ್ಸು ಮನೆಗೆ ಮರಳಿ ಹೋಗಿದ್ದೇವೆ . ಕಾಲೇಜಿನ ಸಮಯಕ್ಕೆ ಸರಿಯಾಗಿ ಹೋಗದೇ ಪ್ರಾಂಶುಪಾಲರು ಶಾಲೆಯಿಂದ ಹೊರಗಡೆ ಕಳಿಸಿರುತ್ತಾರೆ. ನಾವು ಬಸ್ ಪಾಸ್ ಪಡೆದು ಆಟೋ ಹಾಗೂ ಖಾಸಗಿ ಬಸ್‌ನಲ್ಲಿ ಹಣ ನೀಡಿ ಹೋಗುತ್ತಿದ್ದೇವೆ ಎಂದು ತಿಳಿಸಿದರು.