ಕೊರಟಗೆರೆ: ಪಟ್ಟಣದ ರಿಂಗ್ ರಸ್ತೆಯ ವನಮಾಲ ಪೆಟ್ರೋಲ್ ಬಂಕ್ ಬಳಿ ಲಾರಿ ಮತ್ತು ದ್ವಿ ಚಕ್ರ ವಾಹನಗಳ ನಡುವೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ ಪಟ್ಟ ದಾರುಣಾ ಘಟನೆ ಕೊರಟಗೆರೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಬೈಕ್ ಸವಾರ ದೊಡ್ಡಯ್ಯ 55 ವರ್ಷ ಮೃತಪಟ್ಟ ದುರ್ದೈವಿ.
ದೊಡ್ಟಯ್ಯ ಹೊಳವನಹಳ್ಳಿ ಹೋಬಳಿಯ ಕೋಡ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದು. ದ್ವಿಚಕ್ರ ವಾಹನದಲ್ಲಿ ಹೊಳವನಹಳ್ಳಿ ಕಡೆಯಿಂದ ಕೊರಟಗೆರೆ ಕಡೆಗೆ ಬರುವಾಗ ಲಾರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಸುರೇಶ್, ಪಿಎಸ್ಐ ಪ್ರದೀಪ್ ಸಿಂಗ್ ಹಾಗೂ ಸಿಬ್ಬಂದಿಗಳಾದ ಮುಖ್ಯಪೇದೆ ಸಂಜೀವ್, ಜಯಪ್ರಕಾಶ್, ರಂಗರಾಜು ಪೇದೆ ಧರ್ಮಪಾಲ್ ನಾಯಕ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Related Articles
ಇದನ್ನೂ ಓದಿ : ಕುಣಿಗಲ್ ನಲ್ಲಿ ಎರಡು ಪ್ರತ್ಯೇಕ ಭೀಕರ ಅಪಘಾತ: ಐವರು ಪ್ರಾಣಾಪಾಯದಿಂದ ಪಾರು