ಕೊರಟಗೆರೆ; ಗಾರ್ಮೆಂಟ್ಸ್ ಕೆಲಸ ಮುಗಿಸಿಕೊಂಡು ಕಾರ್ಮಿಕರನ್ನು ಮನೆಗೆ ಕರೆತರುತ್ತಿದ್ದ ಟಿಟಿ ವಾಹನವೊಂದು ಹಿಟಾಚಿ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ತಾಲೂಕಿನ ಕೋಳಾಲ ಹೋಬಳಿಯ ಚಿಕ್ಕಪಾಲನಹಳ್ಳಿ ಗೇಟ್ ಸಮೀಪದ ಬಳಿ ಬುಧವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ, ಗಂಭೀರ ಗಾಯಗೊಂಡ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳುಗಳಾದ ಕವಿತಾ ಜೆ.ಸಿ, ಪದ್ಮಾವತಿ, ದಾಕ್ಷಾಯಿಣಿ, ಲಕ್ಷ್ಮಮ್ಮ ಮಂಜಮ್ಮ, ಶಾರದಮ್ಮಭಾಗ್ಯಶ್ರೀ, ಕೆಂಪರಾಜು ಗಾಯಗೊಂಡವರು.
ಅಪಘಾತಕ್ಕೆ ಚಾಕನ ಅತಿ ವೇಗದ ಚಲನೆಯೇ ಕಾರಣ ಎಂದು ಗಾಯಗೊಂಡ ಮಹಿಳೆ ಠಾಣೆಗೆ ದೂರು ನೀಡಿದ್ದಾರೆ.
ಕೋಳಾಲ ಪೋಲಿಸ್ ಠಾಣೆಯ ಪಿಎಸ್ಐ ಮಹಾಲಕ್ಷ್ಮಮ್ಮ.ಹೆಚ್.ಎನ್ ಕಲಂ 279 ,337 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದಾರೆ.
ಇದನ್ನೂ ಓದಿ :