Advertisement
ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣ, ಸಂತೆ ಮೈದಾನ, ಬಾಲಕಿಯರ ಪ್ರೌಢಶಾಲೆ, ಪ್ರಥಮದರ್ಜೆ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು, ಖಾಸಗಿ ಬಸ್ ನಿಲ್ದಾಣ, ಟೀ ಅಂಗಡಿ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಕೆಲಸವೇ ಇಲ್ಲದೇ ವಿನಾಕಾರಣ ತಿರುಗಾಡುವ ಪುಂಡರಿಗೆ ಬಿಸಿಮುಟ್ಟಿಸುವ ಕೆಲಸವನ್ನು ಕೊರಟಗೆರೆ ಪಿಎಸೈ ಚೇತನ್‌ಗೌಡ ನೇತೃತ್ವದ ಪೊಲೀಸರ ತಂಡ ಮಾಡಿದೆ.
Related Articles
ಕಾಲೇಜು ಸಮಯದಲ್ಲಿ ಅತಿವೇಗದ ಚಾಲನೆ ಮತ್ತು ವಿನಾಕಾರಣ ತಿರುಗಾಡುವ ದ್ವಿಚಕ್ರವಾಹನ, ಆಟೋ ಮತ್ತು ಕಾರುಗಳ ಮಾಹಿತಿಯನ್ನು ಎರಡು ದಿನದ ಮುಂಚೆಯೇ ಕೊರಟಗೆರೆ ಪೊಲೀಸರ ತಂಡ ಪತ್ತೆ ಹಚ್ಚಿದ್ದಾರೆ. ಮಾರನೇಯ ದಿನವೇ ಪಿಎಸೈ ಚೇತನ್‌ಗೌಡ ನೇತೃತ್ವದ ಪೊಲೀಸರ ತಂಡ ಬೀಸಿದ ಬಲೆಗೆ ದ್ವಿಚಕ್ರ ವಾಹನ ಸಮೇತ ಪುಂಡರು ಬಿದ್ದಿದ್ದಾರೆ. 10ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಪುಂಡ ಯುವಕರಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
Advertisement
ಯುವ ವಿದ್ಯಾರ್ಥಿಗಳ ಬಗ್ಗೆ ಕಾಲೇಜು ಆಡಳಿತ ಮಂಡಳಿ ಜಾಗೃತೆ ವಹಿಸಬೇಕಿದೆ. ೧೮ವರ್ಷದ ಒಳಗಿನ ಮಕ್ಕಳಿಗೆ ಪೋಷಕರು ದ್ವಿಚಕ್ರ ವಾಹನ ನೀಡಬಾರದು. ವಿದ್ಯಾಥಿಗಳಿಗೆ ಏನೇ ಸಮಸ್ಯೆ ಇದ್ದರೂ ನೇರವಾಗಿ ಬಂದು ಠಾಣೆಗೆ ದೂರುನೀಡಿ. ಟೀಅಂಗಡಿ ಮತ್ತು ಹೊಟೇಲ್ ಮಾಲೀಕರು ಪುಂಡರಿಗೆ ವಿನಾಕಾರಣ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟರೇ ತಕ್ಷಣ ನಾನೇ ಸ್ಥಳಕ್ಕೆ ಬರುತ್ತೇನೆ.
– ಚೇತನ್‌ಗೌಡ. ಪಿಎಸೈ. ಕೊರಟಗೆರೆ
ಇದನ್ನೂ ಓದಿ: ಪುತ್ತೂರು: ಯುವತಿಗೆ ಚೂರಿ ಇರಿತ ಪ್ರಕರಣ… ಘಟನೆ ನಡೆದ 24 ತಾಸಿನೊಳಗೆ ಆರೋಪಿ ಸೆರೆ