Advertisement
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೇಟ್ಟದ ಶ್ರೀರೇವಣ್ಣ ಸಿದ್ದೇಶ್ವರ ಕನಕಗುರು ಶ್ರೀಮಠದಲ್ಲಿ ಜಿಪಂ ಮತ್ತು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ 3ಕೋಟಿ 35ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದರು.
Related Articles
Advertisement
ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಎಸ್.ನಾಗಣ್ಣ, ಮಧುಕರ್, ತಹಶೀಲ್ದಾರ್ ನಾಹೀದಾ, ತಾಪಂ ಇಓ ದೊಡ್ಡಸಿದ್ದಯ್ಯ, ಜಿಪಂ ಎಇಇ ರವಿಕುಮಾರ್, ಸಿದ್ದರಬೆಟ್ಟ ಗ್ರಾಪಂ ಅಧ್ಯಕ್ಷೆ ವಿನೋದ, ಕುರುಬರ ಸಂಘದ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ರಂಗಧಾಮಯ್ಯ, ನಾಗಭೂಷನ್, ಲಕ್ಷ್ಮೀಕಾಂತ , ಗಂಗಯ್ಯ, ರಂಗರಾಜು ಸೇರಿದಂತೆ ಇತರರು ಇದ್ದರು.
3ಕೋಟಿ 35ಲಕ್ಷದ ಕಾಮಗಾರಿಗೆ ಚಾಲನೆ..ಕೊರಟಗೆರೆ ಜಿಪಂ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯಿಂದ 3ಕೋಟಿ 35ಲಕ್ಷದ ಸಿದ್ದರಬೆಟ್ಟದ ಮುಖ್ಯರಸ್ತೆಯಿಂದ ರೇವಣ್ಣ ಸಿದ್ದೇಶ್ವರ ಕನಕಗುರು ಮಠದ ಸಂಪರ್ಕದ 1.2ಕೀಮೀ ರಸ್ತೆ ಕಾಮಗಾರಿ. ಸಿಮೆಂಟ್ ಕಾಂಕ್ರಿಟ್ ರಸ್ತೆ-1230ಮೀ, ಆರ್‌ಸಿಸಿ ಸೇತುವೆ-10.3ಮೀ, ಆರ್‌ಸಿಸಿ ಸೇತುವೆ-2ಮೀ, ಆರ್‌ಸಿಸಿ ಚರಂಡಿ-50ಮೀ, ಆರ್‌ಸಿಸಿ ಪೈಪ್ ಸೇತುವೆ-600ಎಂಎA, ಆರ್‌ಸಿಸಿ ರಕ್ಷಣಾ ಗೋಡೆ-40ಮೀ, ಹೈಮಾಸ್ಕ್ ದ್ವೀಪ-4, ಸಂಪರ್ಕ ಸೇತುವೆ-600ಎಂಎA ಕಾಮಗಾರಿ ನಡೆಯಲಿದೆ. ಕರ್ನಾಟಕ ರಾಜ್ಯದ ದಲಿತ ಸಿಎಂ ಕನಸು..
ಕರ್ನಾಟಕ ರಾಜ್ಯದಲ್ಲಿ ಲಿಂಗಾಯಿತ, ಬ್ರಾಹ್ಮಣ, ಕುರುಬ, ಒಕ್ಕಲಿಗ ಸಮುದಾಯದಿಂದ ಈಗಾಗಲೇ ಸಿಎಂ ಆಗಿ ರಾಜ್ಯದ ಆಡಳಿತ ನಡೆಸಿದ್ದಾರೆ. ಕರ್ನಾಟಕ ರಾಜಕೀಯ ರಂಗದಲ್ಲಿ ಡಾ.ಜಿ.ಪರಮೇಶ್ವರ್ ಅಜಾತಶತ್ರು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ದಲಿತ ಸಿಎಂ ಆದರೇ ಸಾಮಾಜಿಕ ನ್ಯಾಯ ದೊರೆಯುವ ಕನಸು ನನಸಾಗಲಿದೆ. ಸದಾ ಜನತೆಯ ಮಧ್ಯೆ ಇರುವಂತಹ ಸರಳತೆಯ ರಾಜಕಾರಣಿ ಮತ್ತೇ ಕೊರಟಗೆರೆ ಕ್ಷೇತ್ರದಿಂದ ಜಯಗಳಿಸಿ ರಾಜ್ಯದ ಸಿಎಂ ಆಗಲಿ ಎಂದು ಶ್ರೀಈಶ್ವರಾನಂದಪುರಿ ಮಹಾಸ್ವಾಮಿಗಳು ಆರ್ಶಿವಾದ ಮಾಡಿದರು. ಸಾಧುಸಂತರು ತಪಸ್ಸು ಮಾಡಿರುವ ತಪೋಭೂಮಿ, ರೇವಣ್ಣ ಸಿದ್ದೇಶ್ವರ ತಪಸ್ಸು ಮಾಡಿರುವ ಪವಿತ್ರಸ್ಥಳ ಸಿದ್ದರಬೆಟ್ಟ ಶ್ರೀಕ್ಷೇತ್ರ. ಹಾಲುಮತದ ಕುಲಗುರು ರೇವಣ್ಣ ಸಿದ್ದೇಶ್ವರ. ಹತ್ತಾರು ವರ್ಷಗಳ ಹಾಲುಮತಸ್ಥರ ಸಮುದಾಯದ ಕನಸು ಈಗ ನನಸಾಗುವ ಕಾಲ ಹತ್ತಿರ ಬರುತ್ತೀದೆ. ಸಿದ್ದರಬೆಟ್ಟದ ಶ್ರೀಕನಕಗುರು ಪೀಠ ಮಠದ ಸ್ಥಾಪನೆಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪಾತ್ರ ಅನನ್ಯವಾಗಿದೆ.
– ಶ್ರೀಈಶ್ವರಾನಂದಪುರಿ ಮಹಾಸ್ವಾಮಿಗಳು. ಕನಕಗುರು ಪೀಠಶಾಖಾಮಠ. ಹೊಸದುರ್ಗ.